` ಸೃಜನ್, ಹರಿಪ್ರಿಯಾ ಅದ್ಧೂರಿ ಮದುವೆ.. ಶಾಸ್ತ್ರಕ್ಕೊಂದು ಸೆಟ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
eloborate sets for ellidhe illitanaka wedding sequence
Ellidhe Illitanaka Movie Image

ಎಲ್ಲಿದ್ದೆ ಇಲ್ಲೀ ತನಕ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಸೃಜನ್ ಲೋಕೇಶ್, ಹರಿಪ್ರಿಯಾ ಜೋಡಿಯ ಈ ಚಿತ್ರದಲ್ಲಿ ಒಂದು ನವಿರಾದ ಲವ್ ಸ್ಟೋರಿ ಇದೆ. ವಿಶೇಷವೆಂದರೆ, ಇಡೀ ಸಿನಿಮಾದ ಶೇ.40ರಷ್ಟು ಕಥೆ ನಡೆಯೋದು ಮದುವೆ ಮಂಟಪದಲ್ಲಿ. ಚಿತ್ರದ ನಾಯಕ ಕೋಟ್ಯಧಿಪತಿ. ಆತನ ಸ್ಟೇಟಸ್‍ಗೆ ತಕ್ಕಂತೆ ಮದುವೆ ಅದ್ಧೂರಿಯಾಗಿ ಆಗಬೇಕು. ಹೀಗಾಗಿ ಮದುವೆ ಮಂಟಪದ ದೃಶ್ಯಗಳು ಭರ್ಜರಿಯಾಗಿ ಬಂದಿವೆ. ಇಡೀ ಸಿನಿಮಾದ 40ರಷ್ಟು ಕಥೆ, ಮದುವೆ ಮಂಟಪದಲ್ಲೇ ಆಗುತ್ತೆ ಎಂದಿದ್ದಾರೆ ಸೃಜನ್ ಲೋಕೇಶ್.

ಹೀಗಾಗಿ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಒಂದೊಂದು ಶಾಸ್ತ್ರಕ್ಕೂ ಒಂದೊಂದು ಸೆಟ್ ಹಾಕಲಾಗಿದೆ. ಮದುವೆ ಮನೆಯಲ್ಲಿ ನಡೆಯುವ ಒಂದು ಘಟನೆಯೇ ಇಡೀ ಚಿತ್ರದ ಟರ್ನಿಂಗ್ ಪಾಯಿಂಟ್ ಎನ್ನುತ್ತಾರೆ ನಿರ್ದೇಶಕ ತೇಜಸ್ವಿ.

ನಾಯಕರಾಗಿರುವ ಸೃಜನ್ ಲೋಕೇಶ್, ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery