Print 
archana, aa dinagalu,

User Rating: 5 / 5

Star activeStar activeStar activeStar activeStar active
 
aa dinagalu archana gets engaged
Archana

ಆ ದಿನಗಳು ಖ್ಯಾತಿಯ ಅರ್ಚನಾ ವೇದ ಅಲಿಯಾಸ್ ಅರ್ಚನಾ ಶಾಸ್ತ್ರಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಕನ್ನಡದ ಮಿಂಚು, ಮೇಘ ವರ್ಷಿಣಿ ಹಾಗೂ ಮೈತ್ರಿ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಅರ್ಚನಾಗೆ ದೊಡ್ಡ ಮಟ್ಟದ ಹೆಸರು, ಖ್ಯಾತಿ ತಂದುಕೊಟ್ಟಿದ್ದ ಚಿತ್ರ ಆ ದಿನಗಳು.

ಹೆಲ್ತ್ ಕೇರ್ ಕಂಪನಿಯೊಂದರ ವೈಸ್ ಪ್ರೆಸಿಡೆಂಟ್ ಆಗಿ ಅರ್ಚನಾ ಭಾವಿ ಪತಿ ಜಗದೀಶ್. ಅರ್ಚನಾ ಅವರ ದೀರ್ಘ ಕಾಲದ ಪ್ರಿಯಕರ. ಗೆಳೆಯ. ಹಿತೈಷಿ. ಹೈದರಾಬಾದಿನ ರಾಡಿಸನ್ ಹೋಟೆಲ್‍ನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿದೆ.

ಕ್ಲಾಸಿಕಲ್ ಡ್ಯಾನ್ಸರ್ ಆಗಿರುವ ಅರ್ಚನಾ, 2004ರಲ್ಲಿ ತೆಲುಗು ಚಿತ್ರ ನೇನು ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ನುವ್ವಸ್ತಾನಂಟೆ ನೇನೊದ್ದಂಟಾನಾ,  ಶ್ರೀರಾಮದಾಸು ಚಿತ್ರದ ಸೀತೆಯ ಪಾತ್ರ ಅರ್ಚನಾ ಅವರಿಗೆ ಹೆಸರು ತಂದುಕೊಟ್ಟಿದ್ದವು.