Print 
srujan lokesh maja talkies

User Rating: 0 / 5

Star inactiveStar inactiveStar inactiveStar inactiveStar inactive
 
maja talkies comes to an end
Srujan Lokesh Image

ಮಜಾ ಟಾಕೀಸ್.. ಹಾಗೆಂದ ಕೂಡಲೇ ಒನ್ & ಓನ್ಲಿ ವರಲಕ್ಷ್ಮಿ ಅಪರ್ಣ, ಕಡ್ಲೇ ಪುರಿ ಕುರಿ ಪ್ರತಾಪ್, ಮುದ್ದೇಸ ಮಂಡ್ಯ ರಮೇಶ್, ರಾಣಿ ಶ್ವೇತಾ ಚೆಂಗಪ್ಪ, ಅಡುಗೆ ಭಟ್ಟ ವಿ.ಮನೋಹರ್, ಸಕ್ಕರೆ ಸುಮಾ ಅಪೂರ್ವ ಭರಾದ್ವಜ್,  ಪವನ್, ಚಿಂತಾಮಣಿ ನಯನಾ, ಬಾರ್ ಓನರ್ ವಿಶ್ವ.. ಹಾಗೂ ನಗುವುದಕ್ಕಾಗಿಯೇ ಇರುವ ಇಂದ್ರಜಿತ್ ಲಂಕೇಶ್.. ಇವರೆಲ್ಲರ ಮುಖಗಳೂ ಕಣ್ಣ ಮುಂದೆ ಬರುತ್ತವೆ.

ಮೊದಲು ಕಲರ್ಸ್‍ನಲ್ಲಿ.. ನಂತರ ಕಲರ್ಸ್ ಸೂಪರ್ ಚಾನೆಲ್ಲಿನಲ್ಲಿ ಬರುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಮಜಾ ಟಾಕೀಸ್. ಸೃಜನ್ ಲೋಕೇಶ್ ಅವರೇ ನಿರ್ಮಾಣ ಮಾಡುತ್ತಿದ್ದ ಶೋನಲ್ಲಿ ರೆಮೋ ಮ್ಯೂಸಿಕ್ ಕೂಡಾ ಫೇಮಸ್. ಈ ಶೋ 5 ವರ್ಷ ಪೂರೈಸಿದೆ. ಈಗ ಮುಕ್ತಾಯವಾಗುತ್ತಿದೆ.

ಶನಿವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಮಜಾ ಟಾಕೀಸ್, ಕಟ್ಟಕಡೆಯ ಶೋ. ಹಾಗೆಂದು ಇದು ಮುಕ್ತಾಯವಾ..? ಗೊತ್ತಿಲ್ಲ. ಹೊಸ ರೂಪದಲ್ಲಿ ಬಂದರೂ ಆಶ್ಚರ್ಯವಿಲ್ಲ.

ಒಂದೆಡೆ ಎಲ್ಲಿದ್ದೆ ಇಲ್ಲೀ ತನಕ ಸಿನಿಮಾ ನಿರ್ಮಿಸಿ ರಿಲೀಸ್ ಮಾಡುತ್ತಿರುವ ಸೃಜನ್ ಲೋಕೇಶ್, ಕಿರುತೆರೆಯಿಂದ ಬೆಳ್ಳಿತೆರೆಗೆ ಶಿಫ್ಟ್ ಆಗುತ್ತಿದ್ದಾರೆ.