ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್ಬಾಸ್ ಮೂಲಕ ಪರಿಚಯವಾದ ನಿವೇದಿತಾ ಗೌಡ ಈಗ ಬರೀ ಗೆಳೆಯಗೆಳತಿಯಲ್ಲ. ಪ್ರೇಮಿಗಳಾಗಿದ್ದಾರೆ. ಚಂದನ್ ಶೆಟ್ಟಿ, ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ವೇದಿಕೆಯ ಮೇಲೇ ಉಂಗುರ ತೊಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ಚಂದನ್ ಶೆಟ್ಟಿ, ಹಾಡು ಮುಗಿದ ಮೇಲೆ ನಿವೇದಿತಾಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ.
ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಲೇ ನಿವೇದಿತಾ ಗೌಡ, ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದಾರೆ. ಇದು ನಮಗೂ ಗೊತ್ತಿರಲಿಲ್ಲ ಅನ್ನೋದು ಇಬ್ಬರ ತಂದೆ ತಾಯಿ ಮಾತು.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೇಮ ನಿವೇದನೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದ್ದು, ಪರ್ಸನಲ್ ವಿಚಾರವನ್ನು ದಸರಾ ವೇದಿಕೆಗೆ ತಂದಿದ್ದು ಸರಿಯಲ್ಲ, ನಾಡಹಬ್ಬ ಇಂತಹವುಗಳಿಗೆಲ್ಲ ವೇದಿಕೆಯಾಗಬಾರದು ಎಂದು ಚಂದನ್ ಶೆಟ್ಟಿ, ನಿವೇದಿತಾ ಗೌಡ, ದಸರಾ ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ.