ಯುವರತ್ನ ಟೀಸರ್ ಯಾವಾಗ..? ಟ್ರೇಲರ್ ಯಾವಾಗ..? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನು ಕಾಡಿದ್ದ ಪುನೀತ್ ಅಭಿಮಾನಿಗಳು, ಕೊನೆಗೆ ತಾವೇ ಬಿಡುಗಡೆ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದರು. ಅಭಿಮಾನಿಗಳ ಈ ಪ್ರೀತಿಯ ಕಾಟಕ್ಕೆ ಮಣಿದ ಸಂತೋಷ್ ಆನಂದ್ ರಾಮ್, ಚಿತ್ರದ ಪ್ರೊಡಕ್ಷನ್ ಹಂತದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಯುವರತ್ನ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದ್ದಾರೆ.
ಅಕ್ಟೋಬರ್ 7ರ ಹಬ್ಬದಂದು ಸಂಜೆ 5.30ಕ್ಕೆ ಹೊಂಬಾಳೆ ಫಿಲಂಸ್ನ ಯೂಟ್ಯೂಬ್ ಚಾನೆಲ್ನಲ್ಲಿ ಯುವರತ್ನ ಟೀಸರ್ ರಿಲೀಸ್ ಆಗಲಿದೆ. ಇತ್ತೀಚೆಗಷ್ಟೇ ಟೀಸರ್ನ ಡಬ್ಬಿಂಗ್ ಮುಗಿಸಿದ್ದೇನೆ ಎಂದು ವಿಷಯ ತಿಳಿಸಿದ್ದರು ಪುನೀತ್.
ಸ್ಸೋ.. ಗೆಟ್ ರೆಡಿ ಟು ಯುವರತ್ನ ಟೀಸರ್.