ಅಧ್ಯಕ್ಷ ಇನ್ ಅಮೆರಿಕ ಚಿತ್ರದಲ್ಲಿ ರಾಗಿಣಿ ಜೊತೆ ನಟಿಸಿರುವ ಶರಣ್, ಚಿತ್ರದುದ್ದಕ್ಕೂ ಸಿಕ್ಕಾಪಟ್ಟೆ ರೊಮ್ಯಾನ್ಸ್ ಮಾಡಿದ್ದಾರೆ. ಸಿನಿಮಾದಲ್ಲಿ ರಾಗಿಣಿ ಗಂಡ.. ಅಲ್ಲಲ್ಲ.. ಹೆಂಡತಿ. ಶರಣ್ ಹೆಂಡತಿ.. ಅಲ್ಲಲ್ಲ.. ಗಂಡ. ಯೋಗಾನಂದ್ ಮುದ್ದಾನ್ ನಿರ್ದೇಶನದ ಚಿತ್ರದಲ್ಲಿ ಹೆಜ್ಜೆ ಹೆಜ್ಜೆಗೂ ಕಾಮಿಡಿ ಇದೆ.
ಕೋಪದಲ್ಲಿ ರೊಮ್ಯಾನ್ಸ್ ಇದೆ. ಜಗಳದಲ್ಲಿ ರೊಮ್ಯಾನ್ಸ್ ಇದೆ. ವಿರಹದಲ್ಲೂ ರೊಮ್ಯಾನ್ಸ್ ಇದೆ. ಕಾಮಿಡಿಯಲ್ಲೂ ರೊಮ್ಯಾನ್ಸ್ ಇದೆ ಎನ್ನುವುದು ರಾಗಿಣಿ-ಶರಣ್ ಒಕ್ಕೊರಲ ಮಾತು.
ಅಧ್ಯಕ್ಷದಲ್ಲಿ ಶರಣ್-ಚಿಕ್ಕಣ್ಣ ಜೋಡಿ ಸಕ್ಸಸ್ ಆಗಿತ್ತು. ಅದಾದ ಮೇಲೆ ಇಬ್ಬರೂ ಒಟ್ಟಿಗೇ ನಟಿಸಿದ್ದ ಚಿತ್ರಗಳೂ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದವು. ಈ ಚಿತ್ರದಲ್ಲಿ ಶರಣ್ ಜೊತೆ ಶಿವರಾಜ್ ಕೆ.ಆರ್.ಪೇಟೆ ನಟಿಸಿದ್ದಾರೆ. ನಗೋಕೆ ರೆಡಿಯಾಗಿ.