ರಕ್ಷಿತಾ ಪ್ರೇಮ್ ಮದುವೆಯ ನಂತರ ಬೆಳ್ಳಿತೆರೆಯಿಂದ ದೂರವೇ ಉಳಿದುಬಿಟ್ಟಿದ್ದಾರೆ. 2007ರಲ್ಲಿ ರಿಲೀಸ್ ಆದ ತಾಯಿಯ ಮಡಿಲು ಚಿತ್ರವೇ ಕೊನೆ. ಅದಾದ ನಂತರ ರಕ್ಷಿತಾ ಬಣ್ಣ ಹಚ್ಚಿಲ್ಲ. ಈಗ ಮತ್ತೆ ಬರುತ್ತಿದ್ದಾರೆ. ಅದೂ ಡಿಂಪಲ್ ಕ್ವೀನ್ ಜೊತೆ.
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿ ರಕ್ಷಿತಾ ಅವರ ಸೋದರ ರಾಣಾ ಹೀರೋ. ಆ ಚಿತ್ರದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದ ಹಾಡೊಂದರಲ್ಲಿ ರಕ್ಷಿತಾ, ರಚಿತಾ ಜೊತೆ ಹೆಜ್ಜೆ ಹಾಕಲಿದ್ದಾರೆ.
ಅಂದಹಾಗೆ ಇದು ಲವ್ ಫೇಲ್ಯೂರ್ ಸಾಂಗ್. ಅದೂ ಹುಡುಗರದ್ದಲ್ಲ. ಹುಡುಗೀರದ್ದು. ಹುಡುಗೀರು ಕುಡ್ಕೊಂಡ್ ಲವ್ ಫೇಲ್ಯೂರ್ ಸಾಂಗ್ ಹಾಡಿದ್ರೆ ಹೆಂಗಿರುತ್ತೆ.. ಅನ್ನೋ ಹುಳ ಬಿಟ್ಟೇ ಹಾಡಿಗೆ ರೆಡಿಯಾಗಿದ್ದಾರೆ ಪ್ರೇಮ್. ಗೆಟ್ ರೆಡಿ ಟು.. ಎಣ್ಣೆಗೂ.. ಹೆಣ್ಣಿಗೂ.. ಎಲ್ಲಿಂದ ಲಿಂಕಿದೆ ಭಗವಂತಾ..