` ಲಕ್ಷ್ಮೀ ಬಾರಮ್ಮ ಹೀರೋ ಹೊಸ ಸಿನಿಮಾ ಶ್ರೀ ; ರಾಘಣ್ಣನ ಮಗನಾಗಿ ಚಂದು ಗೌಡ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ragahvednra rajkumar's next film titled sri
Raghavendra Rajkumar

ಲಕ್ಷ್ಮೀ ಬಾರಮ್ಮ, ಕಿರುತೆರೆಯ ಜನಪ್ರಿಯ ಧಾರಾವಾಹಿ. ಆ ಧಾರಾವಾಹಿಯ ಕ್ಯೂಟ್ ಹುಡುಗನಾಗಿ ನಟಿಸಿ ಗೆದ್ದಿರುವ ಚಂದೂ ಗೌಡ, ಈಗ ಶ್ರೀ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಆದಿತಿ ಮಹದೇವ್ ನಿರ್ದೇಶನದ ಚಿತ್ರದಲ್ಲಿ ಚಂದೂಗೌಡ ಹೀರೋ ಆದರೆ, ಅನುಷಾ ಸತೀಶ್ ನಾಯಕಿ. ವಿಶೇಷವೆಂದರೆ, ರಾಘವೇಂದ್ರ ರಾಜ್‍ಕುಮಾರ್ ನಾಯಕನ ತಂದೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶ್ರೀ ಅನ್ನೋ ಟೈಟಲ್‍ಗೆ ತಸ್ಮೈ ಶ್ರೀ ಗುರವೇ ನಮಃ ಅನ್ನೋ ಟ್ಯಾಗ್‍ಲೈನ್ ಇದೆ. ಗುರುವಿನ ಮಹತ್ವ ಸಾರುವ ಕತೆ, ಚಿತ್ರದಲ್ಲಿದೆಯಂತೆ. ಆರ್.ಸ್ವಾಧೀನ್ ಕುಮಾರ್ ಚಿತ್ರದ ನಿರ್ಮಾಪಕರಾಗಿದ್ದಾರೆ.