ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರ ಪ್ರತಿ ಹಂತದಲ್ಲೂ ಬೊಂಬಾಟ್ ಸದ್ದು ಮಾಡ್ತಿದೆ. ಈಗ ಟ್ರೇಲರ್ ಬಿಡುಗಡೆಯಲ್ಲೂ ಭರ್ಜರಿ ಸದ್ದು ಮಾಡ್ತಿದೆ. ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಭರಾಟೆ ಚಿತ್ರದ ಟ್ರೇಲರ್ ಅಕ್ಟೋಬರ್ 1ರಂದು ಲಾಂಚ್ ಆಗುತ್ತಿದೆ. ಆ ದಿನ ಬರುತ್ತಿರುವ ಅತಿಥಿಗಳ ಪಟ್ಟಿ ನೋಡಬೇಕು.
ನಟರಾದ ದುನಿಯಾ ವಿಜಯ್, ನೀನಾಸಂ ಸತೀಶ್, ಡಾಲಿ ಧನಂಜಯ್, ಧನ್ವೀರ್, ವಿಕ್ಕಿ ವರುಣ್, ರಾಜ್ ವರ್ಧನ್ ಜೊತೆಯಲ್ಲಿ, ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ, ಹರಿ ಸಂತೋಷ್, ಸತ್ಯ ಪ್ರಕಾಶ್ ಇರುತ್ತಾರೆ. ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ಉಮಾಪತಿ ಶ್ರೀನಿವಾಸ್, ಉದಯ್ ಕೆ. ಮೆಹ್ತಾ, ಟಿ.ಆರ್. ಚಂದ್ರಶೇಖರ್ ಕೂಡ ಕಾರ್ಯಕ್ರಮಕ್ಕೆ ಹಾಜರಿ ಹಾಕಲಿದ್ದಾರೆ. ವಿಶೇಷ ಅತಿಥಿ ಡಾ.ರಾಜ್ ಮೊಮ್ಮಗ ಯುವರಾಜ್ ಕುಮಾರ್.
ಸುಪ್ರೀತ್ ನಿರ್ಮಾಣದ ಚಿತ್ರಕ್ಕೆ ಭರ್ಜರಿ ಚೇತನ್ ನಿರ್ದೇಶಕ. ಕಿಸ್ ಖ್ಯಾತಿಯ ಶ್ರೀಲೀಲಾ ನಾಯಕಿ. ರಚಿತಾ ರಾಮ್ ಅವರದ್ದು ಗೆಸ್ಟ್ ರೋಲ್. ಒಟ್ಟಿನಲ್ಲಿ ಭರಾಟೆ ಏನ್ ಮಾಡಿದ್ರೂ ಭರಾಟೆಯೇ..