ಕೆಜಿಎಫ್ ಚಾಪ್ಟರ್ 2 ತಂಡಕ್ಕೆ ಎದುರಾಗಿದ್ದ ಅತಿ ದೊಡ್ಡ ಸಮಸ್ಯೆಯೊಂದು ಕೊನೆಗೂ ನಿವಾರಣೆಯಾಗಿದೆ. ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್ ಅಭಿನಯದ ಕೆಜಿಎಫ್ 2ಗೆ ಅತಿದೊಡ್ಡ ರಿಲೀಫ್ ಸಿಕ್ಕಿದೆ.
ಕೆಜಿಎಫ್‍ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಶ್ರೀನಿವಾಸ್ ಎಂಬುವವರು ಕೆಜಿಎಫ್‍ನ ಸೈನೇಡ್ ಪ್ರದೇಶದಲ್ಲಿ ಚಿತ್ರೀಕರಣ ಮಾಡದಂತೆ ನ್ಯಾಯಾಲಯದಿಂದ ತಡೆ ತಂದಿದ್ದರು. ಸೈನೇಡ್‍ನ ದಿಬ್ಬಗಳಲ್ಲಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ವಾದಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ನಿರ್ಮಾಪಕ ವಿಜಯ್ ಕಿರಗಂದೂರು, ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ. 25 ದಿನಗಳಲ್ಲಿ ಚಿತ್ರೀಕರಣ ಮುಗಿಸುತ್ತೇವೆ ಹಾಗೂ ಪರಿಸರಕ್ಕೆ ಹಾನಿ ಮಾಡುವುದಿಲ್ಲ ಎಂದು ಹೈಕೋರ್ಟ್‍ನಲ್ಲಿ ವಾಗ್ದಾನ ನೀಡಿ, ಮತ್ತೆ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1, ಸೂಪರ್ ಸಕ್ಸಸ್ ಕಂಡಿದ್ದು, ಚಾಪ್ಟರ್ 2 ಮೇಲೆ ಭರ್ಜರಿ ನಿರೀಕ್ಷೆ ಇದೆ.