` ಇನ್ನು 70 ದಿನ ಕಾಯಿರಿ. ಅವನೇ ಬರ್ತಾನೆ.. ಬಂದೇ ಬರ್ತಾನೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
avane srimmanrayana may release in december
Avane Srimannarayana

ಅವನೇ ಶ್ರೀಮನ್ನಾರಾಯಣ. ಸುಮಾರು ಎರಡು ವರ್ಷಗಳಿಂದ ಸುದ್ದಿಯಲ್ಲಿರುವ ಚಿತ್ರ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ನಟಿಸಿರುವ ಚಿತ್ರದ ಪೋಸ್ಟರ್, ಟೀಸರುಗಳೇ ಭಾರಿ ಕುತೂಹಲ ಹುಟ್ಟಿಸಿವೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಚಿತ್ರದ ಬಿಡುಗಡೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಏಕೆಂದರೆ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಬಂದು ಈ ಡಿಸೆಂಬರ್‍ಗೆ 3 ವರ್ಷ ತುಂಬಲಿದೆ. ಈ ನಿರೀಕ್ಷೆಗಳಿಗೆ, ಕಾತುರಗಳಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಉತ್ತರ ಕೊಟ್ಟಿದ್ದಾರೆ.

ಇನ್ನು 70 ದಿನ. ಅವನು ಬಂದೇ ಬರ್ತಾನೆ ಎಂದಿದ್ದಾರೆ. ಅಂದರೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಎನ್ನುವುದು ಪಕ್ಕಾ. ಸಚಿನ್ ರವಿ ನಿರ್ದೇಶನದ ಸಿನಿಮಾಗೆ ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಇಬ್ಬರೂ ಸಂಗೀತ ನೀಡಿದ್ದಾರೆ. ಸ್ಸೋ.. ಲಾಸ್ಟ್ 70 ಡೇಸ್.