ಕೆಜಿಎಫ್ 2 ಚಿತ್ರದಲ್ಲಿ ಸಂಜಯ್ ದತ್ ನಟಿಸುವುದು ಪಕ್ಕಾ ಆಗಿದ್ದರೂ, ಅವರಿನ್ನೂ ಶೂಟಿಂಗ್ ಟೀಂ ಸೇರಿಕೊಂಡಿರಲಿಲ್ಲ. ಈಗ ಅಧೀರನಾಗಿ ನಟಿಸುತ್ತಿರುವ ಸಂಜಯ್ ದತ್ ಪ್ರವೇಶವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2ನಲ್ಲಿ ರಾಕಿಭಾಯ್ ಎದುರು ಸೇಡು ತೀರಿಸಿಕೊಳ್ಳುವ ಖಳನಾಯಕನಾಗಿ ಬರಲಿದ್ದಾರೆ ಸಂಜಯ್ ದತ್.
ಈ ಚಿತ್ರದ ಮೂಲಕ ಸಂಜಯ್ ದತ್ 21 ವರ್ಷಗಳ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 21 ವರ್ಷಗಳ ಹಿಂದೆ ತೆಲುಗಿನಲ್ಲಿ ಚಂದ್ರಲೇಖಾ ಅನ್ನೋ ಹೆಸರಿನ ಸಿನಿಮಾ ಬಂದಿತ್ತು. ನಾಗಾರ್ಜುನ, ರಮ್ಯಾಕೃಷ್ಣ ಜೊತೆಗೆ ಸಂಜಯ್ ದತ್ ನಟಿಸಿದ್ದರು. ಈಗ ಕನ್ನಡದ ಮೂಲಕ ದಕ್ಷಿಣ ಭಾರತಕ್ಕೆ ಮತ್ತೆ ಬಂದಿದ್ದಾರೆ ಸಂಜಯ್ ದತ್.