ರಾಧಿಕಾ ಕುಮಾರಸ್ವಾಮಿ ತಮ್ಮ ಅಭಿಮಾನಿಗಳಿಗೆ ಒಂದು ಬಂಪರ್ ಆಫರ್ ಕೊಟ್ಟಿದ್ದಾರೆ. ನಿಮಗೆ ಗೊತ್ತಿದೆ. ರಾಧಿಕಾ ಅವರ ದಮಯಂತಿ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಟ್ರೇಲರ್ ಮೂಲಕ ಬೆಚ್ಚಿ ಬೀಳಿಸಿದ್ದ ರಾಧಿಕಾ, ಈಗ ಒಂದು ಆಫರ್ ಕೊಟ್ಟಿದ್ದಾರೆ.
`ಅನ್ಯಾಯ ಆಗ್ತಿದ್ರೂ ಅನುಸರಿಸಿಕೊಂಡು ಹೋಗೋಕೆ ನಳ ಚರಿತ್ರೆಯಲ್ಲಿ ಬರೋ ನಳದಮಯಂತಿ ಅಲ್ಲ ನಾನು. ಎದುರಾಳಿಗಳ ಎದೆ ಸೀಳಿ, ಶತ್ರುವಿನ ಜೊತೆ ರುದ್ರತಾಂಡವ ಆಡುವ ದಮದಮ ದಮಯಂತಿ ಕಣೋ ನಾನು..' ಎನ್ನುವ ರಾಧಿಕಾ ಕುಮಾರಸ್ವಾಮಿ ಡೈಲಾಗ್ ಭಯಂಕರ ಹಿಟ್ ಆಗಿದೆ.
ನೀವು ಆ ಡೈಲಾಗ್ನ್ನು ಟಿಕ್ ಟಾಕ್ ಮಾಡಬೇಕು. ಒಳ್ಳೆಯ, ಅತಿ ಹೆಚ್ಚು ಲೈಕ್ಸ್ ಗಿಟ್ಟಿಸುವ ಟಿಕ್ ಟಾಕ್ ಮಾಡಿದ 10 ಜನರನ್ನು ರಾಧಿಕಾ ಅವರೇ ಆಯ್ಕೆ ಮಾಡ್ತಾರೆ. ಆ 10 ಜನ ರಾಧಿಕಾ ಕುಮಾರಸ್ವಾಮಿ ಜೊತೆ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಬಹುದು.
ನವರಸನ್ ನಿರ್ದೇಶನದ ದಮಯಂತಿ ಚಿತ್ರದಲ್ಲಿ ರಾಧಿಕಾ ಅವರ ಜೊತೆ ಭಜರಂಗಿ ಲೋಕಿ ಕೂಡಾ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.