` ಮುಚ್ಚುತ್ತಿದ್ದ ಸರ್ಕಾರಿ ಶಾಲೆ ಉಳಿಸಿದ ರಿಷಬ್ ಶೆಟ್ಟಿ : ಸಕ್ಸಸ್ ಸ್ಟೋರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rishab shetty makes this school a model school
Rishab Shetty

ಸರ್ಕಾರಿ ಶಾಲೆಗಳೆಂದರೆ ಹಾರಿ ಹೋದ ಹೆಂಚುಗಳು, ಕುಸಿದು ಬೀಳುವ ಸ್ಥಿತಿಯಲ್ಲಿರುವ ಗೋಡೆ, ಹತ್ತೋ.. ಹದಿನೈದೋ ಮಕ್ಕಳು.. ಶಿಕ್ಷಕರಿಲ್ಲ.. ಬೋರ್ಡಿಲ್ಲ.. ಹೀಗೆ ನೂರಾರು ಸಮಸ್ಯೆಗಳು.. ಇಂತಹ ಕಾರಣಗಳಿಗೇ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ದ.ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈರಂಗಳ ಶಾಲೆಯ ಸ್ಥಿತಿಯೂ ಹಾಗೆಯೇ ಇತ್ತು.

ಅಂದಹಾಗೆ ಈ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು ಸಿನಿಮಾ ಚಿತ್ರೀಕರಣಗೊಂಡಿದ್ದ ಶಾಲೆ. ಮುಚ್ಚುವ ಸ್ಥಿತಿಗೆ ಬಂದಿದದ್ ಶಾಲೆಯನ್ನು ಶೂಟಿಂಗ್ ಮುಗಿಸಿದ ಬಳಿಕವೂ ಮರೆಯದ ರಿಷಬ್ ಶೆಟ್ಟಿ, ಶಾಲೆಯನ್ನು ದತ್ತು ಪಡೆದುಕೊಂಡರು. ಈಗದು ಮಾದರಿ ಶಾಲೆಯಾಗಿ ಬದಲಾಗಿದೆ.

ಶಾಲೆಯನ್ನು ದತ್ತು ಪಡೆದಾಗ ಈ ಶಾಲೆಯಲ್ಲಿದ್ದ ಮಕ್ಕಳ ಸಂಖ್ಯೆ 17. ಈಗ 84. ಶಾಲೆಗೆ ಸುಣ್ಣಬಣ್ಣ ಹೊಡೆಸಿ ಸಿಂಗರಿಸಲಾಗಿದೆ. ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಶುರುವಾಗಿದೆ. ಶಾಲೆಯಲ್ಲಿ ಎಲ್‍ಕೆಜಿ, ಯುಕೆಜಿ ಕೂಡಾ ಶುರುವಾಗಿದೆ. ಊರಿನ ಜನರೆಲ್ಲ ಹೇಳ್ತಿರೋದು ಒಂದೇ ಮಾತು. ಥ್ಯಾಂಕ್ಯೂ ರಿಷಬ್ ಶೆಟ್ಟಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery