` ಪೈಲ್ವಾನ್ ಪಾಠ : ಗೀತಾ ಮುನ್ನೆಚ್ಚರಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
geetha movie team takes precautionary measures
Geetha Movie Image

ಪೈಲ್ವಾನ್ ಚಿತ್ರವನ್ನು ಪೈರಸಿ ಕ್ರಿಮಿನಲ್ಸ್ ಕಾಡಿದ್ದಾರೆ. ಪೈರಸಿಯಿಂದಾಗಿಯೇ ಪೈಲ್ವಾನ್ ಟೀಂ 5 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದೆ. ಪೈರಸಿ ಮಾಡುತ್ತಿದ್ದವರನ್ನು ಬಂಧಿಸಲಾಗಿದೆ. ಲಿಂಕುಗಳನ್ನು ಡಿಲೀಟ್ ಮಾಡಲಾಗಿದೆ. ಹೋರಾಟ ಚಾಲ್ತಿಯಲ್ಲಿದೆ. ಇದೆಲ್ಲದರಿಂದ ಎಚ್ಚೆತ್ತುಕೊಂಡಿರುವುದು ಗೀತಾ ಟೀಂ.

ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಖಾಸಗಿ ಕಂಪೆನಿ ಜೊತೆ ಒಪ್ಪಂದ ಮಾಡಿಕೊಂಡಿರುವ ಗೀತಾ ನಿರ್ಮಾಪಕರು, ಪೈರಸಿ ವಿರುದ್ಧ ಹೋರಾಟ ಆರಂಭಿಸಿದ್ದಾರೆ. ಪೈರಸಿ ಲಿಂಕ್‍ಗಳು ಸೃಷ್ಟಿಯಾದ ತಕ್ಷಣ ಡಿಲೀಟ್ ಮಾಡುವ ವ್ಯವಸ್ಥೆ ಅದು. ಪೈರಸಿ ವಿಡಿಯೋಗಳ ವೆಬ್‍ಸೈಟ್ ಲಿಂಕುಗಳನ್ನು ಡಿಲೀಟ್ ಮಾಡುವುದು  ಆ ಕಂಪೆನಿ ಕೆಲಸ. ಜೊತೆಗೆ ಪ್ರತಿ ಚಿತ್ರಮಂದಿರದಲ್ಲೂ ಗೀತಾ ಟೀಂನವರಿರುತ್ತಾರೆ. ಸೈಬರ್ ಪೊಲೀಸರಿಗೂ ಈ ಬಗ್ಗೆ ಈಗಾಗಲೇ ದೂರು ನೀಡಲಾಗಿದೆ.

ಗೋಲ್ಡನ್ ಸ್ಟಾರ್ ಗಣೇಶ್, ಶಾನ್ವಿ ಶಾನ್ವಿ ಶ್ರೀವಾಸ್ತವ್, ಸುಧಾರಾಣಿ ಅಭಿನಯದ ಗೀತಾ ಚಿತ್ರಕ್ಕೆ ಶಿಲ್ಪಾ ಗಣೇಶ್ ಮತ್ತು ಸೈಯದ್ ಸಲಾಂ ನಿರ್ಮಾಪಕರು. ವಿಜಯ್ ನಾಗೇಂದ್ರ ನಿರ್ದೇಶನದ ಮೊದಲ ಚಿತ್ರವಿದು. ಮೊದಲ ಚಿತ್ರದಲ್ಲೇ 1980ರ ದಶಕದ ಗೋಕಾಕ್ ಚಳವಳಿ, ಪ್ರೇಮಕಥೆ ಇರುವ ಗಟ್ಟಿ ಕಥೆ ಕೈಗೆತ್ತಿಕೊಂಡಿದ್ದಾರೆ ವಿಜಯ್ ನಾಗೇಂದ್ರ.