` ಪೋಷಕ ಪಾತ್ರಕ್ಕೆ ಕೋಟಿ ಪಡೆಯುವ ಪ್ರಕಾಶ್ ರೈ, ನಿಷ್ಕರ್ಷಕ್ಕೆ ಪಡೆದಿದ್ದ ಸಂಭಾವನೆ ಎಷ್ಟು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what was prakash rai's remunaration for nishkarsha
Nishkarsha Movie Image

ಈಗ ಥಿಯೇಟರಿನಲ್ಲಿರುವ ವಿಷ್ಣು ಅಭಿನಯದ ಕ್ಲಾಸಿಕ್ ಸಿನಿಮಾ ನಿಷ್ಕರ್ಷ. 1993ರಲ್ಲಿ ಬಂದಿದ್ದ ಹಾಲಿವುಡ್ ಸ್ಟೈಲ್ ಸಿನಿಮಾ. ಆ ಸಿನಿಮಾ ಬಂದಾಗ ವಿಷ್ಣುವರ್ಧನ್ ಕನ್ನಡದ ಬಹುಬೇಡಿಕೆಯ ನಟ. ಆದರೆ, ಆ ಚಿತ್ರಕ್ಕೆ ವಿಷ್ಣು ಪಡೆದಿದ್ದ ಸಂಭಾವನೆ ಎಷ್ಟು ಗೊತ್ತೆ..? 6 ಲಕ್ಷ ರೂ. ಅದರಲ್ಲಿಯೂ 1 ಲಕ್ಷ ರೂ.ಗಳನ್ನು ನಿರ್ಮಾಪಕರಿಗೆ ಸಹಾಯಕವಾಗಲಿ ಎಂದು ವಾಪಸ್ ಕೊಟ್ಟಿದ್ದರಂತೆ ವಿಷ್ಣು.

ಅದಕ್ಕಿಂತಲೂ ಅಚ್ಚರಿಯ ವಿಷಯ ಇನ್ನೊಂದಿದೆ. ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ ಕೂಡಾ ನಟಿಸಿದ್ದಾರೆ. ನಿಮಗೆ ಗೊತ್ತಿದೆ, ಪ್ರಕಾಶ್ ರೈ ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಪೋಷಕ ನಟ. ಕನ್ನಡದಲ್ಲಷ್ಟೇ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲಿಯೂ ನಟಿಸುವ ಪ್ರಕಾಶ್ ರೈ ಪುಟ್ಟ ಪುಟ್ಟ ಪಾತ್ರಕ್ಕೆ ಕೋಟಿ ಕೋಟಿ ಸಂಭಾವನೆ ಕೊಡುವವರಿದ್ದಾರೆ.

ಆದರೆ ಬಿ.ಸಿ.ಪಾಟೀಲ್ ನಿರ್ಮಾಣದ ಆ ಚಿತ್ರಕ್ಕೆ ಪ್ರಕಾಶ್ ರೈ ಸಂಭಾವನೆ ಎಷ್ಟು ಗೊತ್ತೇ..? 5000 ರೂ. ಯೆಸ್, ದೇಸಾಯಿ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಪ್ರಕಾಶ್ ರೈ 5000 ರೂ. ಸಂಭಾವನೆ ಪಡೆದು ನಟಿಸಿದ್ದರು. ಚಿತ್ರದಲ್ಲಿ ಪ್ರಕಾಶ್ ರೈ ಅವರದ್ದು ಸುರೇಶ್ ಎಂಬ ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್‍ನ ಕಮಾಂಡೋ ಪಾತ್ರ.

Ayushmanbhava Movie Gallery

Ellidhe Illitanaka Movie Gallery