ಅನ್ಯಾಯ ಆಗ್ತಿದ್ರೂ ಅನುಸರಿಸಿಕೊಂಡು ಹೋಗೋಕೆ ನಳಚರಿತ್ರೆಯಲ್ಲಿ ಬರೋ ನಳದಮಯಂತಿ ಅಲ್ಲ ಕಣೋ ನಾನು..ಎದುರಾಳಿಗಳ ಎದೆ ಸೀಳಿ ಮೃತ್ಯುವಿನ ಜೊತೆ ರುದ್ರತಾಂಡವ ಆಡುವ ದಮ ದಮ ದಮಯಂತಿ ಕಣೋ ನಾನು.. ಅಂತಹ ನನಗೇ ದಿಗ್ಬಂಧನ ಹಾಕುವಷ್ಟು ಧಿಮಾಕೇನ್ರೋ ನಿಮಗೆ..
ಅಪ್ಪಟ ದೇವತೆಯ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ ಅಬ್ಬರಿಸುತ್ತದ್ದರೆ ನೋಡುವವರ ಎದೆ ಝಲ್ ಎನ್ನುವುದು ದಿಟ. ಅಷ್ಟರಮಟ್ಟಿಗೆ ದಮಯಂತಿ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ.
ನವರಸನ್ ನಿರ್ದೇಶನದ ದಮಯಂತಿ ಚಿತ್ರದ ಟೀಸರ್ನ ಆರ್ಭಟವಿದು. ಈ ಚಿತ್ರದ ಪಾತ್ರ ನೋಡಿದ ಬಳಿಕ ಚಿಕ್ಕ ಮಕ್ಕಳು ನನ್ನ ಜೊತೆ ಮಾತನಾಡಲು ಹೆದರಿಕೊಳ್ಳುವುದು ಗ್ಯಾರಂಟಿ ಎಂದಿದ್ದಾರೆ ರಾಧಿಕಾ. ಅಫ್ಕೋರ್ಸ್.. ಟೀಸರಿನಲ್ಲಿ ಅಷ್ಟೇ ಭಯಂಕರವಾಗಿ ಕಾಣಿಸಿದ್ದಾರೆ ರಾಧಿಕಾ. 5 ಭಾಷೆಗಳಲ್ಲಿ ದಮಯಂತಿ ಟೀಸರ್ ರಿಲೀಸ್ ಆಗಿದೆ.