ನಿಷ್ಕರ್ಷ ಸಿನಿಮಾ 26 ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ವಿಷ್ಣುವರ್ಧನ್ ಅಭಿನಯದ ಈ ಕ್ಲಾಸಿಕ್ ಸಿನಿಮಾ ವಿಷ್ಣು ಹುಟ್ಟುಹಬ್ಬದ ಸ್ಪೆಷಲ್ ಆಗಿ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ. 1993ರಲ್ಲಿ 100 ದಿನ ಓಡಿದ್ದ ಚಿತ್ರವಿದು.
ವಿಷ್ಣು ಸರ್ ಅಭಿನಯದ ಸೂಪರ್ ಸಿನಿಮಾಗಳಲ್ಲಿ ಇದೂ ಒಂದು. ನಾನಂತೂ ಈ ಚಿತ್ರದ ಅಭಿಮಾನಿ. ಆಗಿನ ಕಾಲಕ್ಕೇ ಹಾಲಿವುಡ್ ಶೈಲಿಯ ಸಿನಿಮಾ ಕೊಟ್ಟಿದ್ದರು ಸುನಿಲ್ ಕುಮಾರ್ ದೇಸಾಯಿ. ನಾನಂತೂ ಈ ಚಿತ್ರವನ್ನು ಹಲವು ಬಾರಿ ನೋಡಿದ್ದೇನೆ. ಈಗ ನಿರ್ಮಾಪಕ ಬಿ.ಸಿ.ಪಾಟೀಲ್, ಚಿತ್ರವನ್ನು ಹೊಸ ಟೆಕ್ನಾಲಜಿಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಆಗ ನೋಡಿದ್ದವರೂ ಈಗ ಮತ್ತೆ ನೋಡಬೇಕು. ಖಂಡಿತಾ ಅದ್ಭುತ ಅನುಭವ ನಿಮ್ಮದಾಗಲಿದೆ ಎಂದಿದ್ದಾರೆ ಪುನೀತ್ ರಾಜ್ಕುಮಾರ್.
ವಿಷ್ಣುವರ್ಧನ್ ಜೊತೆಗೆ ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್ಕರ್ ನಟಿಸಿದ್ದ ಚಿತ್ರವನ್ನು ಆಗಿನ ಕಾಲಕ್ಕೆ 60 ಲಕ್ಷ ಬಜೆಟ್ಟಿನಲ್ಲಿ ನಿರ್ಮಿಸಲಾಗಿತ್ತು. ಈಗ ಅದೇ ಚಿತ್ರವನ್ನು 1 ಕೋಟಿ ಖರ್ಚು ಮಾಡಿ ರಿಲೀಸ್ ಮಾಡುತ್ತಿದ್ದಾರೆ ಬಿ.ಸಿ.ಪಾಟೀಲ್.