ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಮತ್ತೊಮ್ಮೆ ನಿರ್ಮಾಪಕರ ಮುಖದಲ್ಲಿ ನಗು ಅರಳಿಸಿದೆ. ಅಯೋಗ್ಯ, ಚಮಕ್, ಬೀರ್‍ಬಲ್ ಚಿತ್ರಗಳಲ್ಲಿಯೂ ಗೆದ್ದಿದ್ದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟೂ ಗೆದ್ದಿದ್ದಾರೆ. ಏಕೆಂದರೆ ಚಿತ್ರದ ರೀಮೇಕ್ ರೈಟ್ಸ್ ಒಳ್ಳೆಯ ಬೆಲೆಗೆ ಸೇಲ್ ಆಗಿದೆ. ಡಿಜಿಟಲ್ ರೈಟ್ಸ್‍ಗೆ ಒಳ್ಳೆಯ ರೇಟು ಬಂದಿದೆ.
ತಮಿಳು, ತೆಲುಗು ಹಾಗೂ ಮಲಯಾಳಂನ ರಿಮೇಕ್ ಹಕ್ಕುಗಳಿಂದಲೇ ನಿರ್ಮಾಪಕರು ಬಂಡವಾಳದ 3 ಪಟ್ಟು ಲಾಭ ಮಾಡಿದ್ದಾರಂತೆ. ಟಿವಿ ಹಕ್ಕುಗಳಿಗೆ 3 ಚಾನೆಲ್‍ಗಳಿಂದ ಬೇಡಿಕೆ ಬಂದಿದೆ.
ಸುಜಯ್ ಶಾಸ್ತ್ರಿ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ ನಾಯಕರಾಗಿ ನಟಿಸಿದ್ದರು. ಕವಿತಾ ಗೌಡ ನಾಯಕಿಯಾಗಿದ್ದರು. ಸಿನಿಮಾ 50ನೇ ದಿನದತ್ತ ಮುನ್ನುಗ್ಗುತ್ತಿದೆ.