` ಸುದೀಪ್ ಸುಂದರವಾಗಿ ಕಾಣುತ್ತಿದ್ದಾರೆ - ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivanna feels extremely ha[[y and proud after watching pailwan
Sudeep, Shivarajkumar

ಪೈಲ್ವಾನ್ ಚಿತ್ರದ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯಲು ಮುನ್ನುಗ್ಗುತ್ತಿರುವ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಎಂಬ ಪ್ರಶ್ನೆಗೆ ಶಿವರಾಜ್ ಕುಮಾರ್ ಕೊಟ್ಟಿರೋ ಉತ್ತರ ಇದು. ಪೈಲ್ವಾನ್ ಚಿತ್ರವನ್ನು ಥಿಯೇಟರಿನಲ್ಲಿ ನೋಡಿ ಖುಷಿ ಪಟ್ಟ ಶಿವಣ್ಣ, ಚಿತ್ರದ ಸಂದೇಶವಂತೂ ಅದ್ಭುತ ಎಂದಿದ್ದಾರೆ.

ಸುದೀಪ್ ತುಂಬಾ ಚೆನ್ನಾಗಿ ಕಾಣ್ತಾರೆ. ಫಿಟ್ ನೆಸ್ ಬಗ್ಗೆ ಇಂಟ್ರೆಸ್ಟ್ ತೆಗೆದುಕೊಂಡು ಮಾಡಿರುವ ಚಿತ್ರ. ಹೀಗಾಗಿಯೇ ಸುದೀಪ್ ಪೈಲ್ವಾನ್ ಚಿತ್ರದಲ್ಲಿ ಸುಂದರವಾಗಿ ಕಾಣುತ್ತಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಕೃಷ್ಣ ಅದ್ಭುತ ಕೆಲಸ ಮಾಡಿದ್ದಾರೆ ಎಂದು ಹೊಗಳಿದ್ದಾರೆ.

ಪೈರಸಿ ಕುರಿತಂತೆ ಮಾತನಾಡಿರುವ ಅವರು ಇಡೀ ಚಿತ್ರರಂಗ ಒಂದು. ತಪ್ಪು ಯಾರು ಮಾಡಿದ್ದರೂ ತಪ್ಪು ತಪ್ಪೇ. ಕನ್ನಡದಲ್ಲಿ ಒಳ್ಳೆಯ ಸಿನಿಮಾ ಬಂದರೆ ಅದನ್ನು ನೋಡಿ ಹೆಮ್ಮೆ ಪಡಬೇಕು ಎಂದಿದ್ದಾರೆ ಶಿವಣ್ಣ.

Sagutha Doora Doora Movie Gallery

Popcorn Monkey Tiger Movie Gallery