` ಚಿರು ಸರ್ಜಾ ಮತ್ತೊಂದು ಹೊಸ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chiru sarja signs another film
Chiranjeeivi Sarja

ಚಿರಂಜೀವಿ ಸರ್ಜಾ ಫುಲ್ ಬ್ಯುಸಿಯಾಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸಿಂಗ ಚಿತ್ರದ ಯಶಸ್ಸಿನ ಝೂಮ್‍ನಲ್ಲಿರೋ ಚಿರಂಜೀವಿ ಸರ್ಜಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ. ಖಾಕಿ, ಆದ್ಯ, ರಾಜಮಾರ್ತಾಂಡ, ಜುಗಾರಿ ಕ್ರಾಸ್.. ಹೀಗೆ ಒಂದರ ಹಿಂದೊಂದು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವ ಚಿರು ಇನ್ನೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಲಕ್ಕಿ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಬ್ಯಾನರಿನಲ್ಲಿ ಪಕ್ಕಾ ಆ್ಯಕ್ಷನ್ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಬುದ್ದಿವಂತ 2 ಚಿತ್ರಕ್ಕೆ ಸಹ ನಿರ್ದೇಶಕರಾಗಿರುವ ಮಹೇಶ್ ಚೈತನ್ಯ ಈ ಚಿತ್ರಕ್ಕೆ ನಿರ್ದೇಶಕ.

ಜೋಗಿ ಚಿತ್ರದ ಮಾದರಿಯಲ್ಲಿ ಈ ಚಿತ್ರ ಮೂಡಿಬರಲಿದೆ. ಡಿಸೆಂಬರ್‍ನಲ್ಲಿ ಶೂಟಿಂಗ್ ಶುರು ಎಂದಿದ್ದಾರೆ ಟಿ.ಆರ್.ಚಂದ್ರಶೇಖರ್.

Adhyaksha In America Success Meet Gallery

Ellidhe Illitanaka Movie Gallery