` ವಿನಯ್ ರಾಜ್ ಕುಮಾರ್ ಬಾಕ್ಸಿಂಗ್ ಚಿತ್ರಕ್ಕೆ ಟೈಟಲ್ 10 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vinay rajkumar's new film with pushkar titled ten
Vinay Rajkumar's New Film Titled Ten

ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ವಿನಯ್ ರಾಜ್ ಕುಮಾರ್ ಬಾಕ್ಸರ್ ಆಗಿ ನಟಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಟೆನ್ ಅನ್ನೋದು ಚಿತ್ರದ ಟೈಟಲ್. ಕರಮ್ ಚಾವ್ಲಾ ನಿರ್ದೇಶನದ ಚಿತ್ರಕ್ಕೆ ಅನುಷಾ ರಂಗನಾಥ್ ನಾಯಕಿ. ಇಷ್ಟಕ್ಕೂ 10 ಅನ್ನೋ ನಂಬರ್‍ನ್ನೇ ಟೈಟಲ್ ಆಗಿಟ್ಟಿದ್ದೇಕೆ..?

ಬಾಕ್ಸಿಂಗ್‍ನಲ್ಲಿ ಎದುರಾಳಿ ನೆಲಕ್ಕೆ ಬಿದ್ದಾಗ, ರೆಫ್ರಿ 10ರವರೆಗೂ 1..2..3.. ಎಂದು ಕೌಂಟ್ ಮಾಡುತ್ತಾರೆ. 10 ಕೌಂಟ್ ಮುಗಿದ ನಂತರವೂ ಎದುರಾಳಿ ಮೇಲೇಳದಿದ್ದರೆ ಬಿದ್ದಿದ್ದವನು ಸೋತಂತೆ. ಅಷ್ಟರೊಳಗೆ ಬಿದ್ದಿದ್ದವನು ಎದ್ದು ಕಾದಾಡಬೇಕು. ಇನ್ನು ಬಾಕ್ಸಿಂಗ್‍ನಲ್ಲಿ ಸಾಮಾನ್ಯವಾಗಿ 10 ರೌಂಡ್ಸ್ ಫಿಕ್ಸ್ ಆಗಿರುತ್ತೆ. ಈ ಎಲ್ಲವನ್ನೂ ನೋಡಿಕೊಂಡೇ ಚಿತ್ರಕ್ಕೆ 10 ಅನ್ನೋ ಟೈಟಲ್ ಫಿಕ್ಸ್ ಮಾಡಿದೆವು' ಎನ್ನುತ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery