` ಹರ್ಷಿಕಾ ಪೂಣಚ್ಚಗೆ ಪಿತೃ ವಿಯೋಗ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
harshika poonacha's father no more
Harshika Poonacha with her parents

ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಉದ್ದಪಂಡ ಪೂಣಚ್ಚ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ವಿರಾಜಪೇಟೆ ತಾಲೂಕಿನ ಕುಮ್ಮೆತೊಡ್ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ.

ಉದ್ದಪಂಡ ಪೂಣಚ್ಚ ಸಣ್ಣ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಸರ್ಜರಿಯಾಗಿದ್ದರೂ ಊಟ ಮಾಡಲು ಕಷ್ಟವಾಗಿತ್ತು. ಕೇವಲ ಡ್ರಿಪ್ಸ್ ಅಷ್ಟೇ ದೇಹ ಸೇರುತ್ತಿತ್ತು. ಗಣನೀಯ ಪ್ರಮಾಣದಲ್ಲಿ ತೂಕ ಕಳೆದುಕೊಂಡಿದ್ದ ಉದ್ದಪಂಡ ಪೂಣಚ್ಚ ಚೇತರಿಸಿಕೊಳ್ಳಲೇ ಇಲ್ಲ.

Ayushmanbhava Movie Gallery

Ellidhe Illitanaka Movie Gallery