ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡದ ಬಹುತೇಕ ಎಲ್ಲ ಸ್ಟಾರ್‍ಗಳ ಜೊತೆ ನಟಿಸಿರುವ ನಾಯಕಿ. ಸ್ಟಾರ್‍ಗಳ ಹೀರೋಯಿನ್, ಲಕ್ಕಿ ಹೀರೋಯಿನ್ ಎಂದೇ ಗುರುತಿಸಿಕೊಳ್ಳೋ ರಚಿತಾ ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್‍ಗೆ ನಾಯಕಿಯಾಗಿದ್ದಾರೆ. ವಿಲನ್‍ನಲ್ಲಿ ಒಂದು ಹಾಡಿನಲ್ಲಿ ಕುಣಿದಿದ್ದ ರಚಿತಾ, ರುಸ್ತುಂನಲ್ಲಿ ನಟಿಸಿದ್ದರೂ ವಿವೇಕ್ ಒಬೇರಾಯ್ ಜೋಡಿಯಾಗಿದ್ದರು. ಇದು ಮೊದಲನೇ ಮುಖಾಮುಖಿ. ಆದರೆ ರಚಿತಾಗೆ ಆಯುಷ್ಮಾನ್ ಭವ ಸಿಕ್ಕಾಪಟ್ಟೆ ಸ್ಪೆಷಲ್ ಎನಿಸಿರುವುದಕ್ಕೆ ಹಲವು ಕಾರಣ ಇದೆ. ಅದು ಪಿ.ವಾಸು ಡೈರೆಕ್ಷನ್.
ಮೊದಲ ದಿನವೇ ನೀವು ಹೇಗೆ ನಟಿಸುತ್ತೀರೋ ಗೊತ್ತಿಲ್ಲ. ನೋಡೋಣ ಎಂದಿದ್ದರಂತೆ ವಾಸು. ನಟಿಸಲು ಶುರು ಮಾಡಿದ ಮೇಲೆ ಇವರಿನ್ನೂ ಯಾಕೆ ತಮಿಳು, ತೆಲುಗುಗೆ ಹೋಗಿಲ್ಲ ಎಂದಿದ್ದರಂತೆ. ಶಾಟ್ ಮುಗಿದ ಮೇಲೆ ಎಲ್ಲರೂ ರಚಿತಾ ಪರ್ಫಾಮೆನ್ಸ್‍ಗೆ ಕ್ಲಾಪ್ ಮಾಡಿ ಎನ್ನುತ್ತಿದ್ದರಂತೆ. ಹಿರಿಯ ನಿರ್ದೇಶಕದ ಮೆಚ್ಚುಗೆ ನನ್ನ ಕಾನ್ಫಿಡೆನ್ಸ್ ಹೆಚ್ಚಿಸಿತು. ಮೊದಲು ಮೈಕ್‍ನಲ್ಲಿ ಬೈದರೂ, ನಂತರ ಸೀನ್ ಮುಗಿದ ಮೇಲೆ ಪ್ರಶಂಸೆ ಮಾಡುತ್ತಿದ್ದರು ಎನ್ನುತ್ತಾರೆ ರಚಿತಾ ರಾಮ್.
ಬೆಳಗ್ಗೆ 8ಕ್ಕೆ ಸೆಟ್ಟಿಗೆ ಹೋದರೆ ವಾಪಸ್ ಬರುವವರೆಗೆ ಬಟ್ಟೆ ಹಿಂಡಿದಂತೆ ಹಿಂಡಿ ಹಾಕಿ ಕೆಲಸ ತೆಗೀತಿದ್ರು ಎನ್ನುವ ರಚಿತಾ ರಾಮ್ ಅವರಿಗೆ ಹಿಂದಿನ ಸಿನಿಮಾಗಳದ್ದೆಲ್ಲ ಒಂದು ತೂಕವಾದರೆ, ಆಯುಷ್ಮಾನ್ ಭವ ಚಿತ್ರವೇ ಇನ್ನೊಂದು ತೂಕ.
ಒಟ್ಟಿನಲ್ಲಿ ರಚಿತಾಗೆ ದ್ವಾರಕೀಶ್ ಬ್ಯಾನರಿನಲ್ಲಿ ಇದು ಮೊದಲ ಸಿನಿಮಾ. ಶಿವಣ್ಣ ಜೊತೆ ನಾಯಕಿಯಾಗಿ ಮೊದಲ ಸಿನಿಮಾ. ಅಷ್ಟೇ ಅಲ್ಲ, ಪಿ.ವಾಸು ನಿರ್ದೇಶನದಲ್ಲೂ ಮೊದಲನೇ ಸಿನಿಮಾ.