` ಬಿಗ್‍ಬಾಸ್ 7 ಬದಲಾವಣೆ ಗೊತ್ತಾಯ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
big boss 7 will have celeb format only
Big Boss

ಬಿಗ್‍ಬಾಸ್ ರಿಯಾಲಿಟಿ ಶೋ 7ನೇ ಸೀಸನ್‍ಗೆ ಕಾಲಿಟ್ಟಿದೆ. ಒನ್ಸ್ ಎಗೇಯ್ನ್ ಸುದೀಪ್ ಅವರೇ ನಿರೂಪಕ. ಅದರಲ್ಲಿ ಮಾತ್ರ ಯಾವುದೇ ಬದಲಾವಣೆ ಇಲ್ಲ. ಉಳಿದಂತೆ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಗಳಾಗಿವೆ.

ಈ ಬಾರಿ ಬಿಗ್‍ಬಾಸ್ ಕಲರ್ಸ್ ಸೂಪರ್‍ನಲ್ಲಿ ಅಲ್ಲ, ಕಲರ್ಸ್‍ನಲ್ಲಿಯೇ ಪ್ರಸಾರವಾಗಲಿದೆ.

ಕಳೆದ ಬಾರಿಯಂತೆ ಈ ಬಾರಿ ಕಾಮನ್ ಮ್ಯಾನ್ ಇರಲ್ಲ. ಜನಸಾಮಾನ್ಯರ ಬಗ್ಗೆ ವೀಕ್ಷಕರು ಹೆಚ್ಚು ಆಸಕ್ತಿ ತೋರದೇ ಇರುವ ಹಿನ್ನೆಲೆಯಲ್ಲಿ ಈ ಬದಲಾವಣೆ. ಅಂದರೆ 15ಕ್ಕೆ 15 ಜನರೂ ಸೆಲಬ್ರಿಟಿಗಳೇ ಆಗಿರುತ್ತಾರೆ.

ಸೆ.11ರಂದು ಬಿಗ್‍ಬಾಸ್ ಪ್ರೋಮೋ ಶೂಟಿಂಗ್ ನಡೆಯಲಿದೆ. ಅಂದರೆ ಪೈಲ್ವಾನ್ ರಿಲೀಸ್ ಆಗುವ ಮುನ್ನಾ ದಿನ. ಸೆ.13ರಿಂದ ಪ್ರೋಮೋ ರಿಲೀಸ್ ಆಗಲಿದೆ. ಆಗಸ್ಟ್ 20ರಿಂದ ಬಿಗ್‍ಬಾಸ್ ಆರಂಭ.

Ayushmanbhava Movie Gallery

Damayanthi Audio and Trailer Launch Gallery