ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರವನ್ನ 5 ಭಾಷೆಗಳಲ್ಲಿ ರಿಲೀಸ್ ಮಾಡುವುದು ಈಗ ಪಕ್ಕಾ. ಏಕೆಂದರೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಿರುವ ದಮಯಂತಿ ಚಿತ್ರತಂಡ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಪೋಸ್ಟರ್ ರಿಲೀಸ್ ಮಾಡಿದೆ.
ನವರಸನ್ ನಿರ್ದೇಶನದ ದಮಯಂತಿ ಚಿತ್ರದಲ್ಲಿ ಹಾರರ್, ಥ್ರಿಲ್ಲರ್ ಕಥಾ ಹಂದರವಿದೆ. ಚಿತ್ರದ ಟೀಸರ್ನ್ನು ಸೆ.18ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ರಾಧಿಕಾ ಕುಮಾರಸ್ವಾಮಿ ಜೊತೆ ಭಜರಂಗಿ ಲೋಕಿ, ನವೀನ್ ಕೃಷ್ಣ, ಸಾಧುಕೋಕಿಲ, ತಬಲಾ ನಾಣಿ ಮೊದಲಾದವರು ನಟಿಸಿದ್ದಾರೆ.