ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ರುದ್ರಪ್ರಯಾಗ. ಜಯಣ್ಣ ಕಂಬೈನ್ಸ್ನಲ್ಲಿ ನಿರ್ಮಾಣವಾಗ್ತಿರೋ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಚುರುಕಾಗಿನಡೆಯುತ್ತಿವೆ. ರಿಷಬ್ ನಿರ್ದೇಶನ ಇರುವ ಕಾರಣ ಕಥೆ ಫೈನಲ್ ಆದ ಚಿತ್ರಕಥೆಯನ್ನು ಹಲವು ಬಾರಿ ತಿದ್ದಿತೀಡಿ ರೂಪಿಸಲಾಗಿದೆ. ಅದೆಲ್ಲವನ್ನೂ ಫೈನಲ್ ಮಾಡಿಕೊಂಡೇ ನಿರ್ದೇಶನಕ್ಕಿಳಿಯುವ ರಿಷಬ್, ತಮ್ಮ ಚಿತ್ರಕ್ಕೆ ಹೀರೋ ಆಯ್ಕೆ ಮಾಡಿಕೊಂಡಿದ್ದಾರೆ. ಅದು ಅನಂತ್ನಾಗ್.
ಸ.ಹಿ.ಪ್ರಾ.ಪಾ. ದಲ್ಲಿ ಕೂಡಾ ಅನಂತ್ ನಟಿಸಿದ್ದರು. ಒಂದು ಲೆಕ್ಕದಲ್ಲಿ ಆ ಚಿತ್ರಕ್ಕೂ ಅನಂತ್ ಅವರೇ ಹೀರೋ. ಈ ಚಿತ್ರಕ್ಕೂ ಅನಂತ್ ಅವರೇ ಹೀರೋ.
ಇದು ಮುಖ್ಯಪಾತ್ರವಲ್ಲ. ಅವರೇ ಹೀರೋ ಎಂದು ಅಧಿಕೃತವಾಗಿಯೇ ಘೋಷಿಸಿದ್ದಾರೆ ರಿಷಬ್ ಶೆಟ್ಟಿ. ಈಗ ಅನಂತ್ ಅವರಿಗೆ ನಾಯಕಿಯನ್ನು ಹುಡುಕುತ್ತಿದ್ದಾರೆ ರಿಷಬ್.
ಕಥೆ ಕೇಳಿ ಮರುಮಾತನಾಡದೆ ಖುಷಿಯಿಂದ ಒಪ್ಪಿಕೊಂಡರಂತೆ ಅನಂತ್ ನಾಗ್. ಡಿಸೆಂಬರ್ನಲ್ಲಿ ರುದ್ರಪ್ರಯಾಗ ಶೂಟಿಂಗ್ ಶುರುವಾಗಲಿದೆ. 55 ದಿನಗಳ ಶೂಟಿಂಗ್ ಪ್ಲಾನ್ ಮಾಡಲಾಗಿದ್ದು, ಬೆಳಗಾವಿ, ಖಾನಾಪುರ, ಉತ್ತರಾಖಂಡಗಳಲ್ಲಿ ಶೂಟಿಂಗ್ ನಡೆಯಲಿದೆ.