` ಅಜ್ಜಿಯಾಗ್ತಿದ್ದಾರೆ ಮಸ್ತ್ ಮಸ್ತ್ ಹುಡುಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mast mast hudgi raveena tandon is soon to be nani
Raveena Tandon

ಮಸ್ತ್ ಮಸ್ತ್ ಹುಡುಗಿ ಎಂದೇ ಫೇಮಸ್ ಆಗಿರುವ ರವೀನಾ ಟಂಡನ್ ಅಜ್ಜಿಯಾಗುತ್ತಿದ್ದಾರೆ. ಅವರಿಗೀಗ ಜಸ್ಟ್ 44. ಮದುವೆಯಾಗಿದ್ದೂ 30 ದಾಟಿದ ಮೇಲೆ. ಇಷ್ಟು ಬೇಗ ಅಜ್ಜಿಯಾಗೋಕೆ ಹೇಗೆ ಸಾಧ್ಯ ಎನ್ನಬೇಡಿ.

ರವೀನಾ ಟಂಡನ್ ಮದುವೆಗೆ ಮುನ್ನವೇ ಇಬ್ಬರು ಮಕ್ಕಳನ್ನು ದತ್ತು ಸ್ವೀಕರಿಸಿದ್ದರು. ಪೂಜಾ ಮತ್ತು ಛಾಯಾ ಎಂಬ ಹೆಣ್ಣು ಮಕ್ಕಳು. ಅವರ ಜೊತೆಗೆ ರವೀನಾ-ಅನಿಲ್ ತಡಾನಿ ದಂಪತಿಗೆ ರಶಾ ಮತ್ತು ರಣವೀರ್ ಎಂಬ ಮಕ್ಕಳಿದ್ದಾರೆ. ಅಲ್ಲಿಗೆ ಒಟ್ಟು 4 ಮಕ್ಕಳ ತಾಯಿ ರವೀನಾ.

ಈ ಮಕ್ಕಳಲ್ಲಿ ಛಾಯಾ ಗರ್ಭಿಣಿಯಾಗಿದ್ದಾರೆ. ನಾನು ಮತ್ತು ನನ್ನ ಸಂಸಾರ. ನನ್ನ ಮಗುವಿನ ಮಗು. ಕೌಂಟ್‍ಡೌನ್ ಶುರುವಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ರವೀನಾ ಟಂಡನ್.

ಉಪೇಂದ್ರ ಚಿತ್ರದಲ್ಲಿ ಕೀರ್ತಿಯಾಗಿ ನಟಿಸಿದ್ದ ಮಸ್ತ್ ಮಸ್ತ್ ಹುಡುಗಿ, ಈಗ ಮತ್ತೊಮ್ಮೆ ಕೆಜಿಎಫ್ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ.

Geetha Movie Gallery

Ombattane Dikku Launch Meet Gallery