ಅಭಿಷೇಕ್ ಅಂಬರೀಷ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಒಂದು ಫೋಟೋ ಹಾಕಿದ್ದಾರೆ. ತಿರುವಿದ ಮೀಸೆ, ಮುಖದ ತುಂಬಾ ಗಡ್ಡ, ಬೆಂಕಿಯುಗುಳುವ ಕಣ್ಣು.. ಒಟ್ಟಿನಲ್ಲಿ ರಗಡ್ ಲುಕ್ನಲ್ಲಿಯೇ ರಗಡ್ ಲುಕ್. ಇದು ಹೊಸ ಚಿತ್ರದ ಲುಕ್ ಇರಬಹುದಾ..?
ಅಭಿಷೇಕ್ ಯೆಸ್ ಅನ್ನಲ್ಲ.. ನೋ ಅನ್ನಲ್ಲ.. ನೋಡ್ತಾ ಇರಿ, ಕಾಯ್ತಾ ಇರಿ.. ಎಲ್ಲರಿಗೂ ಕುತೂಹಲ ಬರಲಿ ಅಂತಾನೇ ಅಲ್ವಾ ಹೀಗೆಲ್ಲ ಮಾಡೋದು ಎಂದಿದ್ದಾರೆ ಅಭಿಷೇಕ್.
ನಿಖಿಲ್ ಕುಮಾರಸ್ವಾಮಿ, ಗೆಳೆಯನ ಹೊಸ ಪ್ರಾಜೆಕ್ಟ್ಗೆ ಶುಭ ಕೋರಿದ್ದಾರೆ.
ಆದರೆ.. ಇದುವರೆಗೆ ಅಭಿಷೇಕ್ ಅಂಬರೀಷ್ ಅವರ ಹೊಸ ಚಿತ್ರ ಯಾವುದು..? ನಿರ್ಮಾಪಕ ಯಾರು..? ನಿರ್ದೇಶಕ ಯಾರು..? ಎಲ್ಲವೂ ಸಸ್ಪೆನ್ಸ್.