` ಶ್ರೀಮುರಳಿ ಭರಾಟೆಗೆ ನಾಯಕಿಯಾಗಿ ಆದಿತಿ ಪ್ರಭುದೇವ ಎಂಟ್ರಿ..!!! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
aditi prabhudeva joins srimurali's bharaate
Aditi Prabhudeva, Srimurali

ಶ್ರೀಮುರಳಿ-ಶ್ರೀಲೀಲಾ ಅಭಿನಯದ ಭರಾಟೆ ಚಿತ್ರಕ್ಕೆ ಹೊಸ ಹುಡುಗಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ರಚಿತಾ ರಾಮ್ ಗೆಸ್ಟ್ ರೋಲ್‍ನಲ್ಲಿದ್ದಾರೆ. ಹೀಗಿರುವಾಗ ಆದಿತಿ ಪ್ರಭುದೇವ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅರೆ ಶ್ರೀಲೀಲಾ ನಾಯಕಿಯಾಗಿರೋವಾಗ ಇನ್ನೊಬ್ಬ ನಾಯಕಿ ಹೇಗೆ ಬರೋಕೆ ಸಾಧ್ಯ..? ಆಲ್‍ಮೋಸ್ಟ್ ಶೂಟಿಂಗ್ ಮುಗಿಸಿರುವ ಸಿನಿಮಾಗೆ ಹೊಸ ಹೀರೋಯಿನ್ ಹೇಗೆ ಬರ್ತಾರೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಷ್ಟೆ.

ಚಿತ್ರಕ್ಕೆ ಶ್ರೀಲೀಲಾ ಅವರೇ ನಾಯಕಿ. ನೋ ಡೌಟ್. ಆದರೆ ಶ್ರೀಲೀಲಾ ಪಾತ್ರಕ್ಕೆ ಡಬ್ ಮಾಡಿರುವುದು ಆದಿತಿ ಪ್ರಭುದೇವ. ನಾಯಕಿಯೊಬ್ಬರ ಪಾತ್ರಕ್ಕೆ ಇನ್ನೊಬ್ಬ ನಾಯಕಿ ಡಬ್ ಮಾಡಿರುವುದೇ ವಿಶೇಷ.

ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರ ರಿಲೀಸ್‍ಗೂ ಮುನ್ನವೇ ದೊಡ್ಡ ಹವಾ ಎಬ್ಬಿಸಿದೆ. ನಿರ್ಮಾಪಕ ಸುಪ್ರೀತ್ ಚಿತ್ರವನ್ನು ಅಕ್ಟೋಬರ್‍ನಲ್ಲಿ ರಿಲೀಸ್ ಮಾಡಲು ಪ್ಲಾನ್ ಹಾಕಿಕೊಂಡಿದ್ದಾರೆ.

Shivarjun Trailer Launch Gallery

Popcorn Monkey Tiger Movie Gallery