ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ ಕೈಲೀಗ ಸಾಲು ಸಾಲು ಚಿತ್ರಗಳಿವೆ. ಬ್ರಹ್ಮಚಾರಿ, ಗೋದ್ರಾ, ಪರಿಮಳ ಲಾಡ್ಜ್ ನಂತರ ಮತ್ತೊಂದು ಚಿತ್ರಕ್ಕೆ ಓಕೆ ಎಂದಿದ್ದಾರೆ ನೀನಾಸಂ ಸತೀಶ್. ಅದು ಶರ್ಮಿಳಾ ಮಾಂಡ್ರೆ ಜೊತೆ.
ಹೊಸ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆಯವರೇ ನಿರ್ಮಾಪಕಿ. ಆಕೆ ಚಿತ್ರದ ನಂತರ ತೆರೆಯಿಂದ ದೂರವೇ ಇದ್ದ ಶರ್ಮಿಳಾ, ಈಗ ತಮ್ಮದೇ ಬ್ಯಾನರ್ ಮೂಲಕ ಬರುತ್ತಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಕಥೆ ಎಂದಿದ್ದಾರೆ ಶರ್ಮಿಳಾ. ಅರವಿಂದ್ ಶಾಸ್ತ್ರಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಅಕ್ಟೋಬರ್‍ನಲ್ಲಿ ಚಿತ್ರ ಸೆಟ್ಟೇರಲಿದ್ದು, ಅರ್ಧಕ್ಕಿಂತಲೂ ಹೆಚ್ಚು ಭಾಗದ ಚಿತ್ರೀಕರಣ ಲಂಡನ್‍ನಲ್ಲಿಯೇ ನಡೆಯಲಿದೆ. ಚಿತ್ರದಲ್ಲಿ ಶರ್ಮಿಳಾ ಕ್ರೈಂ ರಿಪೋರ್ಟರ್ ಆಗಿ ನಟಿಸುತ್ತಿದ್ದು, ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.