ಹಿರಿಯ ನಟ ಕಾಶೀನಾಥ್ ಪುತ್ರ ಅಭಿಮನ್ಯು ರೀ ಎಂಟ್ರಿ ಆಗುತ್ತಿದ್ದಾರೆ. ಬಾಜಿ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದ್ದ ಕಾಶಿನಾಥ್ ಪುತ್ರ ಅಭಿಮನ್ಯು, 12 ಎಎಂ ಮಧ್ಯರಾತ್ರಿ ಬಳಿಕ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಕಿರಣ್ ಸೂರ್ಯ ಎಂಬುವವರ ಹೊಸ ಚಿತ್ರಕ್ಕೆ ಓಕೆ ಎಂದಿದ್ದಾರೆ ಅಭಿಮನ್ಯು.
ದೇವಕಿ ಚಿತ್ರದ ಸಹನಿರ್ದೇಶಕರಾಗಿದ್ದ ಕಿರಣ್ ಸೂರ್ಯ, ತಾವೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ. ಇದೊಂದು ಕ್ರೈಂ ಥ್ರಿಲ್ಲರ್ ಕಥೆಯಂತೆ. ನಂದೀಶ್ ಎಂ.ಸಿ. ಗೌಡ ಮತ್ತು ಜಿತಿನ್ ಜಿ.ಪಟೇಲ್ ಎಂಬುವವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ.