ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಮಾರ್ಕೆಟಿಂಗ್ ಮಾಡಲು ಮುಂದಾಗಿದೆ ಚಿತ್ರತಂಡ. ಧ್ರುವ ಸರ್ಜಾ, ಈ ಚಿತ್ರದಲ್ಲಿ 3 ವಿಶೇಷ ಗೆಟಪ್‍ಗಳಲ್ಲಿ ನಟಿಸಿದ್ದು, ನಂದಕಿಶೋರ್ ನಿರ್ದೇಶಕ.
WWE ಫೈಟರ್ಸ್‍ಗಳಾದ ಮಾರ್ಗನ್ ಅಸ್ಟೆ, ಕೈಗ್ರೀನ್, ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಪೊಗರಿನ ಪೊಗರು ಹೆಚ್ಚಿಸಿದ್ದಾರೆ. ಕ್ಲೈಮಾಕ್ಸ್ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.
ಹೀಗಾಗಿ ಚಿತ್ರವನ್ನು ಕನ್ನಡದಲ್ಲಷ್ಟೇ ಅಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡಲು ಚಿಂತನೆ ನಡೆಸಿದೆ ಪೊಗರು ಟೀಂ