ಐಂದ್ರಿತಾ ರೇ ಮದುವೆಯ ನಂತರ ಐ ಯ್ಯಾಮ್ ಕಮಿಂಗ್ ಬ್ಯಾಕ್ ಎಂದಿದ್ದರು. ಕನ್ನಡ ಮತ್ತು ಬೆಂಗಾಳಿ ಚಿತ್ರರಂಗದಲ್ಲಿ ಫೇಮಸ್ ಆಗಿರುವ ಐಂದ್ರಿತಾ, ಮದುವೆಯ ನಂತರ ನೇರ ಬಾಲಿವುಡ್ಡಿಗೇ ಲಗ್ಗೆಯಿಟ್ಟಿದ್ದಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಚಿತ್ರದಲ್ಲಿ ಐಂದ್ರಿತಾ ನಾಯಕಿ. ಚಿತ್ರದ ಹೆಸರು ಮೇ ಜರೂರ್ ಆವೂಂಗಾ.
ಚಿತ್ರದಲ್ಲಿ ಐಂದ್ರಿತಾ ಮಾಡೆಲ್ ಆಗಿ ಕಾಣಿಸಿಕೊಂಡಿದ್ದು, ಚಿತ್ರದ ಟೀಸರ್ ಹೊರಬಿದ್ದಿದೆ. ಮದುವೆಯಾದ ಮೇಲೆ ಐಂದ್ರಿತಾ ಇನ್ನಷ್ಟು ಮತ್ತಷ್ಟು ಗ್ಲಾಮರಸ್ ಆಗಿ ಕಾಣಿಸಿದ್ದಾರೆ.