` ಕಾಯ್ಕಿಣಿ ಕಥೆಗೆ ಕಾಸರವಳ್ಳಿ ನಿರ್ದೇಶನ  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
girish kasaravalli back to direction
Girish Kasaravalli

ಗಿರೀಶ್ ಕಾಸರವಳ್ಳಿ ಮತ್ತೆ ನಿರ್ದೇಶಕರಾಗುತ್ತಿದ್ದಾರೆ. 2012ರಲ್ಲಿ ಬಂದ ಕೂರ್ಮಾವತಾರ ಚಿತ್ರವೇ ಕೊನೆ, ಕಾಸರವಳ್ಳಿ ಮತ್ತೆ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. 13 ರಾಷ್ಟ್ರಪ್ರಶಸ್ತಿ ಪಡೆದಿರುವ ಗಿರೀಶ್ ಕಾಸರವಳ್ಳಿ ಈಗ ಮತ್ತೆ ನಿರ್ದೇಶಕರಾಗುತ್ತಿದ್ದಾರೆ.

ಜಯಂತ್ ಕಾಯ್ಕಿಣಿ ಬರೆದಿರುವ ಹಾಲಿನ ಮೀಸೆ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ ಗಿರೀಶ್. ಮನೆ ಕೆಲಸದ ಹುಡುಗನ ಕಥೆ ಇದು. ಚಿತ್ರಕ್ಕೆ ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ ಎಂದು ಟೈಟಲ್ ಇಡಲಾಗಿದೆ.

ಶಿವಕುಮಾರ್ ಚಿತ್ರದ ನಿರ್ಮಾಪಕರಾಗಿದ್ದು, ಎಚ್.ಎಂ.ರಾಮಚಂದ್ರ ಛಾಯಾಗ್ರಹಣವಿರಲಿದೆ. ಮಳೆ ಸಂಪೂರ್ಣ ನಿಂತ ಮೇಲೆ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಕಾಸರವಳ್ಳಿ. ಚಿತ್ರದ ತಾರಾಬಳಗ ಸದ್ಯಕ್ಕೆ ಗುಟ್ಟಾಗಿಯೇ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery