` `ಪರಿಮಳ ಲಾಡ್ಜ್'ನಲ್ಲಿರೋದು ಸಲಿಂಗಿಗಕ ಕಥೆ ಅಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathish ninasam clears rumors regarding parimalalodge
Sathish Ninasam

ನೀನಾಸಂ ಸತೀಶ್, ಯೋಗೀಶ್ ಜೊತೆಯಾಗಿರುವ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಪರಿಮಳ ಲಾಡ್ಜ್. ಚಿತ್ರದ ಟೀಸರ್ ಭರ್ಜರಿ ಸದ್ದು ಮಾಡಿದೆ. ಪರ, ವಿರೋಧಗಳ ಟೀಕೆ ಸುರಿಮಳೆಯಾಗಿದೆ. ಅದಕ್ಕೆ ಕಾರಣವಾಗಿರೋದು ಇಷ್ಟೆ, ಟೀಸರ್‍ನಲ್ಲಿ ಸತೀಶ್ ಮತ್ತು ಯೋಗೀಶ್‍ರನ್ನು ಸಲಿಂಗ ಕಾಮಿಗಳು ಎಂದು ತೋರಿಸಲಾಗಿದೆ. ಹಾಗಾದರೆ..

ಹೌದು.. ಅದೇ ಕಾರಣಕ್ಕೆ ಚಿತ್ರ ಟೀಕೆಗೆ ಗುರಿಯಾಗಿದೆ. ಈ ಟೀಕೆಗಳಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ ಸತೀಶ್. ಇದು ಸಲಿಂಗಿಗಳ ಕಥೆಯಲ್ಲ. ಚಿತ್ರದಲ್ಲೊಂದು ಕಣ್ಣೀರು ತರಿಸುವ ಕಥೆ ಇದೆ. ಟೀಸರ್‍ನಲ್ಲಿರೋದು ನಿರ್ದೇಶಕರ ಚೇಷ್ಟೆಯೇ ಹೊರತು ಮತ್ತೇನಲ್ಲ ಎಂದಿದ್ದಾರೆ ಸತೀಶ್.

ವಿಜಯ್ ಪ್ರಸಾದ್ ಮೊದಲೇ ಚೇಷ್ಟೆ ಚತುರ. ಅದು ಈ ಹಿಂದಿನ ಸಿದ್ಲಿಂಗು, ನೀರ್‍ದೋಸೆಯಲ್ಲಿ ಸಾಬೀತಾಗಿದೆ ಕೂಡಾ. ಹೀಗಾಗಿ ಸತೀಶ್ ಮಾತುಗಳನ್ನು  ನಂಬಬಹುದು.