` ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಮಂಗಾಟ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
huccha venkat's mad act in madikeri
Huccha Vebkat Creats Ruckus In Madikeri

ಹುಚ್ಚ ವೆಂಕಟ್ ಮೆಂಟಲ್ ಅನ್ನೋದು ಗುಟ್ಟೇನಲ್ಲ. ಒಮ್ಮೊಮ್ಮೆ ನಾರ್ಮಲ್ ಎನಿಸುವ, ಮಗದೊಮ್ಮೆ ವಿಕೃತಿ ಎನಿಸುವ ವೆಂಕಟ್, ಥೇಟು ರೌಡಿಯಂತೆಯೇ ಕಾಣ್ತಾರೆ. ಈ ಬಾರಿ ರೌಡಿಯಂತೆಯೇ ವರ್ತಿಸಿ ಒದೆ ತಿಂದಿದ್ದಾರೆ. ಘಟನೆ ನಡೆದಿರೋದು ಮಡಿಕೇರಿಯಲ್ಲಿ.

ಮಡಿಕೇರಿಯ ಬಸ್ ಡಿಪೋ ಬಳಿ ದಿಲೀಪ್ ಎಂಬುವವರ ಕಾರು ನಿಂತಿತ್ತು. ಎಟಿಎಂನಿಂದ ಹೊರಬಂದ ದಿಲೀಪ್‍ನನ್ನು ಯಾಕಲೇ ಗುರಾಯಿಸ್ತೀಯ.. ನೀವು ಮಡಿಕೇರಿಯವ್ರದ್ದು ಜಾಸ್ತಿ ಅಯ್ತು ಎಂದು ಅರಚಿ, ಅವನ ಕಾರಿನ ಗ್ಲಾಸ್‍ನ್ನು ಒಡೆದು ಹಾಕಿದ್ದಾನೆ. ಜನ ಹುಚ್ಚ ವೆಂಕಟ್‍ನ ಹುಚ್ಚಾಟಕ್ಕೆ ರೊಚ್ಚಿಗೆದ್ದು ಗ್ರಹಚಾರ ಬಿಡಿಸಿದ್ದಾರೆ. ಪೊಲೀಸರು ಬಂದು ಬಿಡಿಸಿಕೊಂಡು ಹೋಗುವವರೆಗೆ ಒದೆ ಬಿದ್ದಿವೆ. ಸದ್ಯಕ್ಕೆ ಹುಚ್ಚ ವೆಂಕಟ್ ಮೇಲೆ ಕೇಸ್ ಹಾಕಿ, ಬೆಂಗಳೂರಿಗೆ ಕಳಿಸಿಕೊಟ್ಟಿದ್ದಾರೆ ಮಡಿಕೇರಿ ಪೊಲೀಸರು.

Geetha Movie Gallery

Ombattane Dikku Launch Meet Gallery