` ದಸರಾಗೆ ಅಮೆರಿಕ ಅಧ್ಯಕ್ಷನ ಪಯಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
adhyakashya in america to release for dasara
Sharan, Ragini Image from Adhyaksha In America

2014ರಲ್ಲಿ ತೆರೆ ಕಂಡಿದ್ದ ಅಧ್ಯಕ್ಷನಿಗೂ, ಈ ಅಮೆರಿಕದಲ್ಲಿರೋ ಅಧ್ಯಕ್ಷನಿಗೂ ಸಂಬಂಧವಿಲ್ಲ. ಈ ಅಧ್ಯಕ್ಷ ಇನ್ ಅಮೆರಿಕ ಬರ್ತಾ ಇರೋದು ದಸರಾಗೆ. ಅಕ್ಟೋಬರ್ 4ಕ್ಕೆ ಪ್ರತ್ಯಕ್ಷವಾಗೋ ಅಧ್ಯಕ್ಷ ನಗೆಯ ಹಬ್ಬದೂಟವನ್ನೇ ಬಡಿಸಲಿದ್ದಾನೆ.

ಶರಣ್ ಜೊತೆಗೆ ತುಪ್ಪದ ಹುಡುಗಿ ರಾಗಿಣಿ ಇದ್ದಾರೆ. ದಿಶಾಪಾಂಡೆ, ಶಿವರಾಜ್ ಕೆ.ಆರ್.ಪೇಟೆ, ಸಾಧುಕೋಕಿಲ, ತಬಲಾನಾಣಿ.. ಹೀಗೆ ಕಾಮಿಡಿ ಕಿಲಾಡಿಗಳ ದಂಡೇ ಚಿತ್ರದಲ್ಲಿದೆ. ಹರಿಕೃಷ್ಣ ಇದೇ ಮೊದಲ ಬಾರಿಗೆ ಶರಣ್ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟಿದ್ದಾರೆ. ವಿಶ್ವಪ್ರಸಾದ್, ವಿವೇಕ್ ಕುಚಿಬೊಟ್ಲ ಚಿತ್ರದ ನಿರ್ಮಾಪಕರು.