` ಮತ್ತೆ ನಿಷ್ಕರ್ಷ.. ಈ ಬಾರಿ ಹಿಂದಿಯಲ್ಲೂ ರಿಲೀಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
nishkarsha is back for vishnu's birthdayq
Nishkarsha Movie Image

ನಿಷ್ಕರ್ಷ, ಸುನಿಲ್ ಕುಮಾರ್ ದೇಸಾಯಿಯವರ ಸೂಪರ್ ಹಿಟ್ ಸಿನಿಮಾಗಳಲ್ಲೊಂದು. ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್, ಸುಮನ್ ನಗರ್‍ಕರ್, ರಮೇಶ್ ಭಟ್ ಅಭಿನಯಿಸಿದ್ದ ಚಿತ್ರಕ್ಕೆ ಬಿ.ಸಿ.ಪಾಟೀಲ್ ಅವರೇ ನಿರ್ಮಾಪಕ. 1993ರಲ್ಲಿ ತೆರೆ ಕಂಡಿದ್ದ ಸಿನಿಮಾ ಶತದಿನೋತ್ಸವ ಆಚರಿಸಿತ್ತು.

ಹಾಲಿವುಡ್‍ನ ಡೈ ಹಾರ್ಡ್ ಸಿನಿಮಾದ ಸ್ಫೂರ್ತಿಯಿಂದ ತಯಾರಾಗಿದ್ದ ಸಿನಿಮಾವನ್ನು ಮತ್ತೊಮ್ಮೆ ತೆರೆಗೆ ತರಲು ಹೊರಟಿದ್ದಾರೆ ಬಿ.ಸಿ.ಪಾಟೀಲ್. ಸೆಪ್ಟೆಂಬರ್ 20ರಂದು ನಿಷ್ಕರ್ಷ ರಿ-ರಿಲೀಸ್ ಆಗುತ್ತಿದೆ. ಅದೂ ಡಿಜಿಟಲ್ ರೂಪದಲ್ಲಿ.

ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ಸದ್ದು ಮಾಡುತ್ತಿರುವುದು ಥ್ರಿಲ್ಲರ್ ಸಿನಿಮಾಗಳು. 93ರಲ್ಲೇ ಅಂಥಾದ್ದೊಂದು ಅದ್ಭುತ ಥ್ರಿಲ್ಲರ್ ಕೊಟ್ಟಿದ್ದರು ದೇಸಾಯಿ. ಚಿತ್ರ ಹಲವು ರಾಜ್ಯಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು.

ಚಿತ್ರವನ್ನು ಜಯಣ್ಣ ವಿತರಣೆ ಮಾಡುತ್ತಿದ್ದು, ಸಿನಿಮಾ ಭರ್ಜರಿಯಾಗಿಯೇ ರಿ-ರಿಲೀಸ್ ಆಗಲಿದೆ. ಇದು ವಿಷ್ಣು ಹುಟ್ಟುಹಬ್ಬದ ಕಾಣಿಕೆಯೂ ಹೌದು. ಸೆಪ್ಟೆಂಬರ್ 18ಕ್ಕೆ ವಿಷ್ಣು ಹುಟ್ಟುಹಬ್ಬವಾದರೆ, 20ಕ್ಕೆ ನಿಷ್ಕರ್ಷ ಸಿನಿಮಾ ರಿಲೀಸ್.

Shivarjun Movie Gallery

Popcorn Monkey Tiger Movie Gallery