ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 22ರಂದು ಸಿನಿಮಾದ ಟ್ರೇಲರ್ ಹೊರ ಬರುತ್ತಿದೆ. ಇಂದು ಪೈಲ್ವಾನ್ ಹಬ್ಬ ಎನ್ನುವುದು ಫಿಕ್ಸ್ ಆಗಿದೆ.
ಕಿಚ್ಚ ಸುದೀಪ್, ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಅಭಿನಯದ ಪೈಲ್ವಾನ್ನಲ್ಲಿ ಸುದೀಪ್, ಕುಸ್ತಿ ಪಟುವಾಗಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿಕ್ಸ್ಪ್ಯಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಿಟ್ ಆಗಿವೆ. ಕೃಷ್ಣ ನಿರ್ದೇಶನದ ಚಿತ್ರಕ್ಕೆ, ಸ್ವಪ್ನಾ ಕೃಷ್ಣ ನಿರ್ಮಾಪಕ.
ಒಟ್ಟು 5 ಭಾಷೆಗಳಲ್ಲಿ ಪೈಲ್ವಾನ್ ತೆರೆ ಕಾಣುತ್ತಿದೆ. ಎಲ್ಲ ಭಾಷೆಗಳಲ್ಲಿಯೂ, ಜಗತ್ತಿನಾದ್ಯಂತ ಸಿನಿಮಾ ಸೆಪ್ಟೆಂಬರ್ 12ರಂದು ರಿಲೀಸ್ ಆಗಲಿದೆ. ಮೊನ್ನೆ ಮೊನ್ನೆ ತಾನೇ ಸೈರಾ ನರಸಿಂಹ ರೆಡ್ಡಿ ಟೀಸರ್ ರಿಲೀಸ್ ಆಗಿದ್ದು, ಇನ್ನು ಕಿಚ್ಚನ ಹಬ್ಬ ಶುರುವಾಗಲಿದೆ.