` ಕಿಚ್ಚ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಿದ್ದಾರೆ ರಿಷಬ್ ಶೆಟ್ಟಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rishab sheety sincerly followed sudeep's teachings
Rishab Shetty, Sudeep

ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ ಸ್ಟಾರ್ ನಿರ್ದೇಶಕರಾದ ರಿಷಬ್ ಶೆಟ್ಟಿ, ಬೆಲ್ಬಾಟಂ ಚಿತ್ರದ ನಂತರ ಸ್ಟಾರ್ ಹೀರೋ ಕೂಡಾ ಆಗಿದ್ದಾರೆ. ಕಾಮಿಡಿ ಮತ್ತು ಸೀರಿಯಸ್..ಎರಡನ್ನೂ ಅದ್ಭುತವಾಗಿ ನಿರ್ವಹಿಸುವ ರಿಷಬ್ ಶೆಟ್ಟಿಗೆ ಈಗ ಫುಲ್ ಡಿಮ್ಯಾಂಡ್ ಇದೆ. ಇದರ ನಡುವೆ ರುದ್ರಪ್ರಯಾಗ ಅನ್ನೋ ಚಿತ್ರಕ್ಕೆ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ, ಹೀರೋ ಆಗಿ 4 ಕಥೆಗಳನ್ನು ಒಪ್ಪಿಕೊಂಡಿದ್ದಾರಂತೆ. 

ಮೊದಲ ಆದ್ಯತೆ ನಿರ್ದೇಶನ ಎನ್ನುವ ರಿಷಬ್ ಶೆಟ್ಟಿ, 4 ಕಥೆಗಳನ್ನು ಒಪ್ಪಿದ್ದರೂ ಯಾರಿಂದಲೂ ಅಡ್ವಾನ್ಸ್ ಪಡೆದಿಲ್ಲ. ಕಾರಣ ಇಷ್ಟೆ.. ಸುದೀಪ್ ಹೇಳಿದ್ದ ಮಾತು. ‘‘ನನಗೆ ಸುದೀಪ್‌ ಒಂದು ಪಾಠ ಹೇಳಿಕೊಟ್ಟಿದ್ದಾರೆ.  ಯಾರಿಂದಲೂ ಮೊದಲೇ ಅಡ್ವಾನ್ಸ್‌ ತೆಗೆದುಕೊಳ್ಳಬೇಡ. ಒಂದು ವೇಳೆ ಅಡ್ವಾನ್ಸ್‌ ತಗೊಂಡರೆ ಲಾಕ್‌ ಆದಂತೆ’’ ಎಂದು.. ಆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎನ್ನುತ್ತಾರೆ ರಿಷಬ್ ಶೆಟ್ಟಿ.

Kaalidasa Kannada Mestru Movie Gallery

Kabza Movie Launch Gallery