ಬಡವ ರ್ಯಾಸ್ಕಲ್ ಅನ್ನೋದು ಅಣ್ಣಾವ್ರ ಸ್ಪೆಷಲ್ ಬೈಗುಳ. ಬಹುಶಃ ರಾಜ್ ಚಿತ್ರಗಳಲ್ಲಿ ಅತಿ ಹೆಚ್ಚು ಬೈಗುಳ ಇದೇ ಇರಬೇಕು. ಈಗ ಅದು ಹೊಸ ಚಿತ್ರದ ಟೈಟಲ್ ಆಗಿದೆ. ಬಡವ ರ್ಯಾಸ್ಕಲ್ ಆಗಿರೋದು ಡಾಲಿ ಧನಂಜಯ್.
ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಶಂಕರ್, ಈ ಚಿತ್ರದ ಮೂಲಕ ನಿರ್ದೇಶರಾಗುತ್ತಿದ್ದಾರೆ. ಧನಂಜಯ್‍ಗೆ ಅಮೃತಾ ಅಯ್ಯಂಗಾರ್ ಅನ್ನೋ ಹುಡುಗಿ ನಾಯಕಿ. ಅಂದಹಾಗೆ ಇದು ಕಾಮಿಡಿ ಜಾನರ್ ಇರುವ ಚಿತ್ರವಂತೆ. ಇದೇ ಆಗಸ್ಟ್ 23ಕ್ಕೆ ಸಿನಿಮಾ ಸೆಟ್ಟೇರುತ್ತಿದೆ.