ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರ ಥಿಯೇಟರುಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರ ರಿಲೀಸ್ ಆದ ಮರುದಿನವೇ ಚಿತ್ರತಂಡಕ್ಕೊಂದು ಶಾಕ್ ಕಾದಿತ್ತು. ಕರ್ನಾಟಕದಾದ್ಯಂತ ಭಯೋತ್ಪಾದಕ ದಾಳಿ ಭೀತಿ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಯ್ತು. ಮಾಲ್‍ಗಳಲ್ಲಿ, ತಿಯೇಟರುಗಳಲ್ಲಿ ಭದ್ರತೆ, ತಪಾಸಣೆ ಹೆಚ್ಚಾಯ್ತು. ಈಗ ಥಿಯೇಟರು, ಮಾಲ್‍ಗಳಲ್ಲಿ ಪ್ರತಿದಿನ ಎರಡು ಬಾರಿ ಸಂಪೂರ್ಣ ತಪಾಸಣೆ ನಡೆಯುತ್ತಿದೆ.
ಆದರೆ, ಇದೆಲ್ಲದರ ನಡುವೆಯೂ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿದ್ದಾರೆ. ತಪಾಸಣೆ ಎದುರಿಸಿಕೊಂಡೇ ಬಂದು ಚಿತ್ರವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಖುಷಿಗೊಂಡಿದ್ದಾರೆ ನಿರ್ಮಾಪಕ ಟಿ.ಆರ್.ಚಂದ್ರಶೇಖರ್.
ಸುಜಯ್ ಶಾಸ್ತ್ರಿ ನಿರ್ದೇಶನದ ಚಿತ್ರದಲ್ಲಿ ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಪ್ರಧಾನ ಪಾತ್ರದಲ್ಲಿದ್ದಾರೆ.