` ಗಣೇಶ ಹಬ್ಬಕ್ಕೊಂದು ಹಾಡು ಕೊಟ್ಟ ಭರಾಟೆಗೆ ಥ್ಯಾಂಕ್ಯೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharaate song is super hit
Bharaate

ಭರಾಟೆ ಸಿನಿಮಾ ತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಹಾಡು ರಿಲೀಸ್ ಮಾಡಿತ್ತು. ಅಷ್ಟೇ ಅಲ್ಲ, ಹಾಡಿನ ಆದಾಯವನ್ನು ಪ್ರವಾಹ ಪೀಡಿತರಿಗೆ ಬಳಸುವುದಾಗಿ ಘೋಷಿಸಿತ್ತು. ಈಗ `ಭರ ಭರ ಭರಾಟೆ.. ಹಾಡು ಸಂಚಲನವನ್ನೇ ಸೃಷ್ಟಿಸಿಬಿಟ್ಟಿದೆ. ಇದು ಎಲ್ಲ ದುಃಖಿತರಿಗೆ ಅರ್ಪಣೆ ಎಂದೇ ಶುರುವಾಗುವ ಹಾಡು ಮೋಡಿ ಮಾಡಿದೆ.

ಹಾಡಿರೋದು ಸ್ವತಃ ಶ್ರೀಮುರಳಿ. ಸಾಹಿತ್ಯ ನಿರ್ದೇಶಕ ಚೇತನ್ ಕುಮಾರ್ ಅವರದ್ದು. ಅರ್ಜುನ್ ಜನ್ಯ ಮ್ಯೂಸಿಕ್ಕಿದೆ. ಶ್ರೀಮುರಳಿಗೆ ಚಿತ್ರದಲ್ಲಿ ಶ್ರೀಲೀಲಾ ಜೋಡಿ. ಆದರೆ ಈ ಹಾಡಿನಲ್ಲಿ ರೋರಿಂಗ್ ಸ್ಟಾರ್ ಜೊತೆ ಹೆಜ್ಜೆ ಹಾಕಿರೋದು ಡಿಂಪಲ್ ಕ್ವೀನ್. 

ಸುಪ್ರೀತ್ ನಿರ್ಮಾಣದ ಬಹುಕೋಟಿ ಬಜೆಟ್‍ನ ಸಿನಿಮಾ ರಿಲೀಸ್‍ಗೆ ರೆಡಿಯಾಗುತ್ತಿದೆ. ಆದರೆ, ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆದ ಈ ಹಾಡು ಗಣೇಶನ ಹಬ್ಬದ ಪೆಂಡಾಲ್‍ನಲ್ಲಿಕುಣಿಯೋಕೆ ಕೊಟ್ಟ ಒಳ್ಳೆ ಟಪ್ಪಾಂಗುಚ್ಚಿ ಎಂದು ರೋರಿಂಗ್ ಫ್ಯಾನ್ಸ್ ಥ್ಯಾಂಕ್ಸ್ ಹೇಳ್ತಿದ್ದಾರೆ.

Sagutha Doora Doora Movie Gallery

Popcorn Monkey Tiger Movie Gallery