` ಕುರುಕ್ಷೇತ್ರ ಆಗ ಬಂದಿದ್ರೆ.. ರಾಜ್ ಒಬ್ರೇ ಅಂದ್ರು ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan - rajkumar image
darshan - rajkumar

ಕುರುಕ್ಷೇತ್ರ ಬಾಕ್ಸಾಫೀಸ್‍ನಲ್ಲಿ ದಾಖಲೆಗಳನ್ನು ಕೊಳ್ಳೆ ಹೊಡೆಯುತ್ತಿದೆ. ಪ್ರವಾಹ ಇಲ್ಲದೇ ಹೋಗಿದ್ದರೆ ಇನ್ನೂ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿದ್ದ ಕುರುಕ್ಷೇತ್ರ ಅಕಸ್ಮಾತ್ 70-80ರ ದಶಕದಲ್ಲಿ ಬಂದಿದ್ದರೆ.. ಇಂಥಾದ್ದೊಂದು ಪ್ರಶ್ನೆ ಸ್ವತಃ ದುರ್ಯೋಧನ ದರ್ಶನ್ ಅವರಿಗೆ ಎದುರಾಗಿದೆ. ಆ ಕಾಲದಲ್ಲೇ ಏನಾದರೂ ಕುರುಕ್ಷೇತ್ರ ಬಂದಿದ್ದರೆ ದುರ್ಯೋಧನನ ಪಾತ್ರಕ್ಕೆ ಯಾರು ಸೂಕ್ತವಾಗಿರುತ್ತಿದ್ದರು ಅನ್ನೋದು ದರ್ಶನ್ ಎದುರು ಬಂದ ಪ್ರಶ್ನೆ.

ಕನ್ನಡ ಚಿತ್ರರಂಗದಲ್ಲಿ ದಿಗ್ಗಜರು ಅಂತಾ ಬಂದ್ರೆ ಹಲವರಿದ್ದಾರೆ. ಆದರೆ ಈ ಪಾತ್ರಕ್ಕೆ ಅಣ್ಣಾವ್ರನ್ನು ಬಿಟ್ರೆ ಬೇರೆ ಯಾರೂ ಸೂಕ್ತ ಆಯ್ಕೆ ಆಗುತ್ತಿರಲಿಲ್ಲ ಎಂದಿದ್ದಾರೆ ದರ್ಶನ್.

ದುರ್ಯೋಧನನ ಪಾತ್ರಕ್ಕೆ ತಯಾರಾಗಲು ತಾವು ಭಕ್ತ ಪ್ರಹ್ಲಾದ ಚಿತ್ರವನ್ನು 200ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ. ರಾಜ್ ಅವರ ಹಿರಣ್ಯಕಶಿಪು ಪಾತ್ರವನ್ನು ನೋಡಿಕೊಂಡು ನನಗೆ ಹೊಂದುವ ರೀತಿಯಲ್ಲಿ ಬದಲಿಸಿಕೊಂಡಿದ್ದೇನೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದರು ದರ್ಶನ್.

Shivarjun Movie Gallery

Popcorn Monkey Tiger Movie Gallery