ಉಪೇಂದ್ರ ಮತ್ತು ಶಶಾಂಕ್ ಕಾಂಬಿನೇಷನ್ನಿನ ಬಹುನಿರೀಕ್ಷಿತ ಸಿನಿಮಾ ಶುರುವಾಗಿದೆ. ಸ್ಕ್ರಿಪ್ಟ್ ಪೂಜೆ ಮಾಡಿ ಶಶಾಂಕ್, ಹೊಸ ಸಿನಿಮಾಗೆ ಓಂಕಾರ ಹಾಕಿದ್ದಾರೆ. ಚಿತ್ರದಲ್ಲಿ ಶಶಾಂಕ್, ಸದ್ಯದ ರಾಜಕೀಯ ಬೆಳವಣಿಗೆಗಳನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರಂತೆ. ಶಶಾಂಕ್ ಸದ್ಯಕ್ಕೆ ಬಿಟ್ಟುಕೊಟ್ಟಿರುವ ಗುಟ್ಟು ಇಷ್ಟೇ.
ಉಪೇಂದ್ರಗೆ ಅಮ್ಮ ಐ ಲವ್ ಯು ಖ್ಯಾತಿಯ ನಿಶ್ವಿಕಾ ನಾಯ್ಡು ಹಾಗೂ ಬೀರ್ಬಲ್ ಖ್ಯಾತಿಯ ರುಕ್ಮಿಣಿ ನಾಯಕಿಯರು. ಸೆಪ್ಟೆಂಬರ್ 18ರಂದು ಉಪೇಂದ್ರ ಹುಟ್ಟುಹಬ್ಬವಿದ್ದು, ಆ ದಿನ ಚಿತ್ರದ ಟೈಟಲ್ ಹಾಗೂ ಫಸ್ಟ್ಲುಕ್ ಹೊರತರಲು ನಿರ್ಧರಿಸಿದ್ದಾರೆ ಶಶಾಂಕ್.