ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗಿದೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆ, ಸುಜಯ್ ಶಾಸ್ತ್ರಿ ನಿರ್ದೇಶನ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಹ್ಯಾಪಿ. ಚಿತ್ರ ಇಷ್ಟವಾಗಿರೋದಕ್ಕೆ ಕಾರಣಗಳಿವೆ.
ಈ ಸಿನಿಮಾ ಹೀರೋಗೆ ಅವನು ಹೀರೋ ಅಲ್ಲ ಗೊತ್ತಿದೆ. ಆದರೆ ಅವನು ಸಿನಿಮೀಯ ಘಟನೆಗಳಲ್ಲಿ ಸಿಕ್ಕಿಕೊಳ್ತಾ ಹೋಗ್ತಾನೆ. ಒಂದೂವರೆ ಲಕ್ಷ ಸಂಬಳ ಪಡೆಯೋ ಸಾಫ್ಟ್‍ವೇರ್ ಉದ್ಯೋಗಿ, ಲವ್ ಮಾಡಿಯೇ ಮದುವೆಯಾಗಬೇಕು ಎನ್ನುವ ಹಠ, ಲಾಜಿಕ್ಕುಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾಡಿರುವ ಸಂಕಲನ, ಯಾವುದೇ ಸಂದೇಶ ನೀಡದೆ ಕೇವಲ ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ ಎನ್ನುವಂತೆ ಚಿತ್ರವನ್ನು ಕಟ್ಟಿಕೊಟ್ಟಿರುವ ಸುಜಯ್ ಶಾಸ್ತ್ರಿ, ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಜೋಡಿ ಗೆದ್ದಿದೆ.