` ಕೆಜಿಎಫ್ ದಾಖಲೆ ಮುರಿಯುತ್ತಾ ಕುರುಕ್ಷೇತ್ರ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will kurukshetra beat kgf's record
Kurukshetra

ಕನ್ನಡದಲ್ಲಿ ಸದ್ಯಕ್ಕೆ ಅತೀ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿದ ದಾಖಲೆ ಕೆಜಿಎಫ್ ಹೆಸರಿನಲ್ಲಿದೆ. 100 ಕೋಟಿ ದಾಟಿದ ಮೊದಲ ಕನ್ನಡ ಚಿತ್ರ ಕೆಜಿಎಫ್. ಈಗ ಆ ದಾಖಲೆಯನ್ನು ಕುರುಕ್ಷೇತ್ರ ಮುರಿಯುವತ್ತ ದಾಪುಗಾಲಿಟ್ಟಿದೆ. 

ಕುರುಕ್ಷೇತ್ರ ಚಿತ್ರ ಮೊದಲ ದಿನ 13 ಕೋಟಿ ಕಲೆಕ್ಷನ್ ಮಾಡಿತ್ತು. 2ನೇ ದಿನ 10 ಕೋಟಿ ಹಾಗೂ 3ನೇ ದಿನ 5 ರಿಂದ 6 ಕೋಟಿ ಕಲೆಕ್ಷನ್ ಮಾಡಿದೆ. ತೆಲುಗಿನಲ್ಲೂ ಕಲೆಕ್ಷನ್ ಒಂದೂವರೆ ಕೋಟಿ ದಾಟಿದೆ.

ಒಂದು ವಾರ ಕಳೆಯುವ ಮೊದಲೇ 35 ಕೋಟಿ ದಾಖಲೆ ಮಾಡಿರುವ ಕುರುಕ್ಷೇತ್ರ, ಕೆಜಿಎಫ್ ದಾಖಲೆ ಮುರಿಯುವ ಸಾಧ್ಯತೆಗಳಿವೆ. ಸದ್ಯಕ್ಕೆ ಕುರುಕ್ಷೇತ್ರ ಕನ್ನಡ ಮತ್ತು ತೆಲುಗಿನಲ್ಲಷ್ಟೇ ರಿಲೀಸ್ ಆಗಿದೆ. ತಮಿಳಿನಲ್ಲಿ ಈ ವಾರ ರಿಲೀಸ್ ಆಗುವ ಸಾಧ್ಯತೆಗಳಿವೆ. ಮಲಯಾಳಂ ಹಾಗೂ ಹಿಂದಿಯಲ್ಲಿ ಇನ್ನೂ ರಿಲೀಸ್ ಆಗಿಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery