` ಸಾವಿನ ನೋವಿನಲ್ಲೂ ಗಣೇಶ್ ನಟಿಸಿದ ಆ ಕಾಮಿಡಿ ಸೀನ್ ಯಾವುದು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
gimmick team reveals about ganesh's heart touching story
Ganesh

ಇದೇ ವಾರ ರಿಲೀಸ್ ಆಗುತ್ತಿರುವ ಗಿಮಿಕ್ ಚಿತ್ರದಲ್ಲಿ ತಂದೆಯ ಸಾವಿನ ನೊವಿನಲ್ಲೂ ಕಾಮಿಡಿ ದೃಶ್ಯವೊಂದರಲ್ಲಿ ಗಣೇಶ್ ನಟಿಸಿದರು ಎನ್ನುವುದು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿರುವುದು ನಿಜ. ಹಲವರು ಗಣೇಶ್ ವೃತ್ತಿ ಪರತೆಯನ್ನು ಮೆಚ್ಚಿದ್ದಾರೆ. ಇಷ್ಟಕ್ಕೂ ಆ ದಿನ ಶೂಟಿಂಗ್ ಆದ ಆ ದೃಶ್ಯವೇನು ಗೊತ್ತೇ..?

ಚಿತ್ರದ ನಾಯಕ ಗಣೇಶ್, ಶ್ರೀಮಂತರ ಮನೆಯ ಹುಡುಗಿಯನ್ನು ನೋಡಲು ಹೋಗುವ ದೃಶ್ಯ. ಚಿತ್ರದ ಅತ್ಯಂತ ಪ್ರಮುಖ ಸೀನ್ ಅದು. ಪ್ರೇಕ್ಷಕರಿಗೆ ಅಷ್ಟೇ ನಗು ತರಿಸುವ ಸೀನ್. ಆ ಸೀನ್‍ಗಾಗಿ ಎಲ್ಲ ಹಿರಿಯ ಕಿರಿಯ ಕಲಾವಿದರೂ ಅಲ್ಲಿದ್ದರು. ಅಕಸ್ಮಾತ್ ನಾನು ಆ ದೃಶ್ಯ ಮಾಡದೇ ಹೋಗಿದ್ದರೆ, ಅಷ್ಟೂ ಜನ ಕಲಾವಿದರ ಡೇಟ್ಸ್ ಹೊಂದಿಸುವುದಿದೆಯಲ್ಲ, ಅದು ಅತಿ ದೊಡ್ಡ ಸವಾಲಾಗುತ್ತಿತ್ತು ಎಂದಿದ್ದಾರೆ ಗಣೇಶ್.

ಆ ದೃಶ್ಯವನ್ನು ನೋವಿನಲ್ಲೇ ನಟಿಸಿದೆ. ಡಬ್ಬಿಂಗ್ ಮಾಡುವಾಗಲೂ ಆ ದೃಶ್ಯ ಬಂದಾಗ ಕಣ್ಣೀರು ಬಂತು. ಕೆಲ ಸಮಯ ಡಬ್ಬಿಂಗ್ ಮಾಡೋಕೆ ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ ಗಣೇಶ್.

ಅಷ್ಟೇ ಅಲ್ಲ, ಇಡೀ ಸೆಟ್‍ನಲ್ಲಿ ಗಣೇಶ್ ತಂದೆಯ ಸಾವಿನ ಸುದ್ದಿ ಗೊತ್ತಿದ್ದುದು ನಟ ರವಿಶಂಕರ್, ಗಣೇಶ್ ಹಾಗೂ ಚಿತ್ರದ ನಿರ್ಮಾಪಕ ದೀಪಕ್ ಸಾಮಿಯವರಿಗೆ ಮಾತ್ರ. ನಿರ್ದೇಶಕರಿಗೂ ತಿಳಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರಂತೆ ಗಣೇಶ್.

Related Articles :-
ಅಲ್ಲಿ ತಂದೆ ಸಾವು.. ಇಲ್ಲಿ ಕಾಮಿಡಿಯ ನೋವು.. ಗಣೇಶ್ ಹೇಳಿದ ಕಣ್ಣೀರ ಕಥೆ 

Mugilpete Shooting Pressmeet In Sakleshpura

Odeya Audio Launch Gallery