ಕೆಜಿಎಫ್ 2ನಲ್ಲಿ ತಮಿಳು ನಟ ಸರಣ್ ಶಕ್ತಿ ನಟಿಸುತ್ತಿದ್ದಾರೆ. ಅವರು ರಾಕಿಭಾಯ್ ಅವರ ಹದಿಹರೆಯದ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಚಿತ್ರಲೋಕ ವರದಿ ಮಾಡಿತ್ತು. ಆದರೆ, ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ ಕೆಜಿಎಫ್-2 ಸಹನಿರ್ಮಾಪಕರೂ ಆಗಿರುವ ಕಾರ್ತಿಕ್ ಗೌಡ. ಚಿತ್ರಲೋಕದ ವರದಿಯನ್ನೇ ರೀ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.
ಸರಣ್ ಶಕ್ತಿ ನಟಿಸುತ್ತಿರುವುದು ನಿಜ. ಆದರೆ, ರಾಕಿಭಾಯ್ ಜೂನಿಯರ್ ಪಾತ್ರದಲ್ಲಿ ಅಲ್ಲ ಎಂದಿದ್ದಾರೆ. ಸರಣ್ ಶಕ್ತಿ ಪಾತ್ರ ಏನು ಎಂಬ ಬಗ್ಗೆ ಸಸ್ಪೆನ್ಸ್ ಹಾಗೆಯೇ ಉಳಿಸಿಕೊಂಡಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಹೀರೋಯಿಸಂ, ಸಂಜಯ್ ದತ್, ರವೀನಾ ಟಂಡನ್ ಕಾಂಬಿನೇಷನ್, ವಿಜಯ್ ಕಿರಗಂದೂರು ನಿರ್ಮಾಣ.. ಹೀಗೆ ಭರ್ಜರಿ ಕಾಂಬಿನೇಷನ್ನುಗಳ ಕೆಜಿಎಫ್-2 ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ.